ಅಭಿಮಾನಿಗಳ ಪರದಾಟಕ್ಕೆ ಬ್ರೇಕ್ ಹಾಕಿದ ಕೆಜಿಎಫ್ ತಂಡ
ಕೆಜಿಎಫ್ …ನಾಲ್ಕು ವರ್ಷದ ಹಿಂದೆ ಕನ್ನಡ ಸಿನಿಮಾ ಅಭಿಮಾನಿಗಳು ಎದೆ ಉಬ್ಬಿಸಿಕೊಂಡು ಅನ್ಯ ಭಾಷೆಯ ಸಿನಿಮಾಮಂದಿಯ ಮುಂದೆ ನಾವ್ಯಾರಿಗೂ ಕಮ್ಮಿ ಇಲ್ಲ ಎಂದು ಹೇಳಿಕೊಳ್ಳುವಂತೆ ಮಾಡಿದ ಸಿನಿಮಾ..
ಚಾಪ್ಟರ್ 1ಆದಾದ ನಂತರ ಚಾಪ್ಟರ್ 2 ಗಾಗಿ ಅಭಿಮಾನಿಗಳು ಕಾದು ಕಾದು ಸಾಕಾಗಿದ್ದಾರೆ…ಸಿನಿಮಾತಂಡವೂ ಕೂಡ ಸಿನಿಮಾತೆರೆಗೆ ತರಲು ಸಾಕಷ್ಟು ಸಾಹಸ ಮಾಡಿತ್ತು ಆದರೆ ಕೊರೋನಾ ಕಾಟದಿಂದ ಸಿನಿಮಾ ಬಿಡುಗಡೆಗೆ ಅದೃಷ್ಟ ಕೂಡಿ ಬರಲೇ ಇಲ್ಲ …ಅಭಿಮಾನಿಗಳು ಸಿನಿಮಾಬಗ್ಗೆ ಅಪ್ಡೇಡ್ ಗಾಗಿ ಮಾಡಿದ ಸಾಹಸ ಒಂದೆರೆಡಲ್ಲ…ಸಿನಿಮಾ ಬಗ್ಗೆ ಮಾಹಿತಿ ಪಡೆಯಲು ಹೋಗಿ ಜೈಲು ಸೇರಿದ್ದು ಆಯ್ತು…
ಈಗ ಕೊನೆಗೂ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ 27ರಂದು ಚಿತ್ರ ನಿರ್ಮಾಣದ ಸಂಸ್ಥೆ ಹೊಂಬಾಳೆ ಯೂಟ್ಯೂಬ್ ಚಾನೆಲ್ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ.

ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ಮೊದಲ ಭಾಗ ಈಗಾಗಲೇ ಹೊಸ ಇತಿಹಾಸವನ್ನೇ ಬರೆದಿದೆ. ಇದೀಗ ಅದರ ಮುಂದುವರಿದ ಭಾಗದ ಮೇಲಿನ ಕುತೂಹಲಕ್ಕೂ ದಿನಗಣನೆ ಶುರುವಾಗಿದ್ದು, ಏ. 14ರಂದು ವಿಶ್ವದಾದ್ಯಂತ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಹೊಂಬಾಳೆ ಸಿನಿಮಾ ಸಂಸ್ಥೆಯ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಎರಡನೇ ಭಾಗದಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರಿ ಸ್ಟಾರ್ ಕಲಾವಿದರ ದಂಡೇ ಇದೆ.