ಜುಲೈ 16ಕ್ಕೆ KGF-2 ರಿಲೀಸ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ರಿಲೀಸ್ ಡೇಟ್ ಈಗ ಫೈನಲ್ ಆಗಿದೆ. ಇದೇ ವರ್ಷ ಜುಲೈ 18ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಲಿದೆ. ರಾಕಿಂಗ್ ಸ್ಟಾರ್ ಜೊತೆಗೆ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಬಹುದೊಡ್ಡ ತಾರಾಗಣವಿರುವ ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ.

ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡ್ತಿರೋ ಕೆಜಿಎಫ್ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಒಂದೇ ದಿನ ಅಂದ್ರೆ ಜುಲೈ 18ಕ್ಕೆ ರಿಲೀಸ್ ಆಗ್ತಾ ಇದೆ. ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿ, ಭುವನ್ ಕ್ಯಾಮರಾ ಕೈಚಳಕವಿರೋ ಸಿನಿಮಾದ ಟೀಸರ್ ಈಗಾಗ್ಲೆ ಸಖತ್ ವೈರಲ್ ಆಗಿದೆ. ಕರೋನಾ ಲಾಕ್ ಡೌನ್ ಬಳಿಕ ಸಿನಿಮಾದ ಟೀಸರ್ ಈ ಬಾರಿಯ ಯಶ್ ಬರ್ತ್ ಡೇಗೆ ರಿಲೀಸ್ ಆಗಿತ್ತು. ಟೀಸರ್ ಮುರಿದಿರೋ ದಾಖಲೆಗಳನ್ನ ನೋಡಿದ್ರೆ ಸಿನಿಮಾ ಕೂಡ ರೆಕಾರ್ಡ್ ಗಳ ಸುರಿಮಳೆ ಸುರಿಸೋದು ಕನ್ ಫರ್ಮ್.