KGF ಕಲ್ಚರ್ ಫಾಲೋ ಮಾಡಿದ ಅಲ್ಲು ಅರ್ಜುನ್ ಪುಷ್ಪ..! 5 ಭಾಷೆಯಲ್ಲಿ ಪುಷ್ಪನ ಹುಲಿಗೀತೆ, ಕನ್ನಡ ವರ್ಷನ್ ಬೊಂಬಾಟ್
ಇಡೀ ದೇಶದ ಸಿನಿಮಾಸಕ್ತರಲ್ಲಿ, ಚಿತ್ರಾಭಿಮಾನಿಗಳಲ್ಲಿ ಅತೀವ ಕುತೂಹಲ ಹುಟ್ಟಿಸಿರೋ ಸಿನಿಮಾಗಳು ಯಾವುದಪ್ಪಾ ಅಂದ್ರೆ, ಥಟ್ ಅಂತ ಎಲ್ಲರೂ ಹೇಳೋದೇ KGF2,RRR, ಪುಷ್ಪ ಅಂತ.
ಹೌದು ಇಡೀ ಭಾರತೀಯ ಚಿತ್ರರಂಗದಲ್ಲಿ ರಿಲೀಸ್ ಗೂ ಮೊದಲೇ ಸಂಚಲನ ಸೃಷ್ಟಿಸಿರೋ ಈ ಮೂರು ಸಿನಿಮಾಗಳೂ ಹಲವಾರೂ ವಿಚಾರಗಳಿಗೆ ದೊಡ್ಡದಾಗಿ ಸದ್ದು ಮಾಡ್ತಿವೆ. ಎಲ್ಲವೂ ಐದು ಭಾಷೆಯಲ್ಲೇ ರಿಲೀಸ್ ಆಗ್ತಿವೆ.
ಅದ್ರಂತೆ, ಇವತ್ತು ಪುಷ್ಪ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡು ರಿಲೀಸ್ ಆಗಿದೆ. ಐದು ಭಾಷೆಯಲ್ಲೂ ಸಂಚಲನ ಸೃಷ್ಟಿಸ್ತಿದೆ. ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿ, ವರದರಾಜ್ ಬರೆದಿರೋ ಸಾಹಿತ್ಯ ಕ್ಕೆ, ವಿಜಯ್ ಪ್ರಕಾಶ್ ಹಾಡಿರೋ ಜೋಕೆ ಜೋಕೆ ಮೇಕೆ ಹಾಡು ಸಖತ್ ಮಾಸ್ ಆಗಿದೆ.

ಜೋಕೆ ಜೋಕೆ ಸಾಂಗ್ ನ ದೃಶ್ಯ
ಕೇಳೋದಕ್ಕೆ ಕ್ಯಾಚಿಯಾಗಿರೋ ಈ ಹಾಡು ಸಿನಿಮಾದ ಫ್ಲೇವರ್ ನ ಹೇಳ್ತಿದೆ. ಹೀರೋ ಇಂಟ್ರಡಕ್ಷನ್ ಸಾಂಗ್ ನಂತಿರೋ ಈ ಹಾಡಲ್ಲಿ ಸಿನಿಮಾದ ಲೈನ್ ನ ಹೇಳಲಾಗಿದೆ. ತುಂಬಾ ರಾ ಆಗಿ ರಗಡ್ ಆಗಿ, ಲೋಕಲ್ ಸೊಗಡು ಭರಿತ ಚಿತ್ರಗಳ ನಿಪುಣ ಸುಕುಮಾರ್ ನಿರ್ದೇಶನದ ಪುಷ್ಪ ಎರಡು ಪಾರ್ಟ್ ಗಳಲ್ಲಿ ಬರುತ್ತಂತೆ.
ಕೆ.ಜಿ.ಎಫ್ ಸಿನಿಮಾದ ಇಂಪ್ಯಾಕ್ಟ್ ಇದೀಗ ಸೌತ್ ಸಿನಿ ದುನಿಯಾವನ್ನ ತುಂಬಾ ಗಾಢವಾಗಿ ಆವರಿಸಿಕೊಂಡಿದ್ದು,, ದಕ್ಷಿಣದ ಎಲ್ಲಾ ಸ್ಟಾರ್ಸ್ ಕೂಡ ಬಹುಭಾಷೆಯಲ್ಲಿ ನೇರವಾಗಿ ಸಿನಿಮಾ ಮಾಡಿ, ನೇರವಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನ ತಲುಪೋ ಸಾಹಸಕ್ಕಿಳಿದಿದ್ದಾರೆ. ಸಿನಿಮಾ ಉದ್ಯಮಕ್ಕೆ ಇದು ಒಳ್ಳೆಯ ಬೆಳವಣಿಗೆಯೇ ಸರಿ. ಸದ್ಯ ಪುಷ್ಪ ಹಾಡಿನ ಹವಾ ನೋಡ್ತಿದ್ರೆ, ಖಂಡಿತ ಇದು ಮತ್ತೊಂದು ಕೆ.ಜಿ.ಎಫ್ ಆಗೋ ಎಲ್ಲಾ ಲಕ್ಷಣಗಳು ಕಾಣ್ತಿದೆ.
****