ಭರವಸೆ ಹುಟ್ಟಿಸಿ ನಿರಾಸೆ ಮೂಡಿಸಿದ್ರು!
2025 ನಮ್ಮ ಚಂದನವನಕ್ಕೆ ಅಷ್ಟೆನೂ ಲಕ್ ತಂದುಕೊಟ್ಟ ಇಯರ್ ಆಗ್ದೇ ಇದ್ರು ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳು ಬಂದವುಅದ್ರಲ್ಲಿ ಕೆಲವು ಹಿಟ್ ಆದ್ರೆ ಇನ್ನು ಕೆಲವು ಫ್ಲಾಪ್ ಆದ್ವು ಮತ್ತಷ್ಟು ಸಿನಿಮಾಗಳು ಭರವಸೆ ಹುಟ್ಟಿಸಿ ನಿರಾಸೆ ಮೂಡಿಸಿದ್ವು.. ಹಾಗಿದ್ರೆ 2025ರಲ್ಲಿ ಯಾವೆಲ್ಲ ಸಿನಿಮಾಗಳು ಭರವಸೆ ಹುಟ್ಟಿಸಿ ಅಬ್ಬರದ ಪ್ರಚಾರ ಮಾಡಿ ಸೋಲನ್ನು ಕಂಡವು ನೋಡ್ತಾ ಹೋಗೋಣ.
2025 ಅಂದುಕೊಂಡ ಹಾಗೆ ಎಲ್ಲ ಆಗಿದ್ರೆ ಈ ವರ್ಷ ಅದೆಷ್ಟೋ ಸಿನಿಮಾಗಳು ಹಿಟ್ ಲಿಸ್ಟ್ ಸೇರಬೇಕಿತ್ತು ಈ ವರ್ಷ ಅತಿಹೆಚ್ಚು ಹೊಸಬರ ಸಿನಿಮಾಗಳು ಬಂದ್ಲು ಹಿಟ್ ಆಗಿಲ್ಲವೆಂದ್ರು ಒಂದು ಮಟ್ಟಿಗೆ ಸೌಂಡ್ ಮಾಡಿದ್ವು, ಅದ್ರಲ್ಲೂ ಈ ವರ್ಷ ಕೊನೆಗೆ ಬಿಗ್ ಬಜೆಟ್ ಸಿನಿಮಾಗಳೇ ಈ ಇಯರ್ ಎಂಡ್ ಮಾಡಿದ್ವು ಕಿಚ್ಚನ ಮಾರ್ಕ್, ಅರ್ಜುನ್ ಜನ್ಯಾ ನಿರ್ದೇಶನದ 45, ದರ್ಶನ್ ನಟನೆಯ ಡೆವಿಲ್ ಈ ಇಯರ್ ನ ಮೊಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾವಾದ್ವು. ಹಾಗಿದ್ರೆ ಈ ವರ್ಷ ಬಂದಂತಹ ಯಾವ ಸಿನಿಮಾ ಭರವಸೆ ಹುಟ್ಟಿಸಿ ನಿರಾಸೆ ಮೂಡಿಸಿತು ನೋಡ್ತಾ ಹೋಗೋಣ.
ರಾಯಲ್
ದಿನಕರ್ ತೂಗುದೂಪ ನಿರ್ದೇಶನದ ವಿರಾಟ್ ಹಾಗೂ ಸಂಜಾನ ಆನಂದ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರೋ ರಾಯಲ್ ಜನವರಿ 24ರಂದು ತೆರೆಕಂಡಿತು, ಅಬ್ಬರದ ಪ್ರಚಾರ ಕಂಡರು, ಆಲ್ ಮೋಸ್ಟ್ ದಿನಕರ್ ಸಿನಿಮಾಗಳು ಯಾವುದು ಸೋತಿಲ್ಲ ಬಟ್ ಬ್ಯಾಡ್ ಲಕ್ ಎಂಬಂತೆ ರಾಯಲ್ ಸಿನಿಮಾ ಅಷ್ಟೇನು ಸೌಂಡ್ ಮಾಡಿಲ್ಲ.
ಪಾರು ಪಾರ್ವತಿ

ಪಾರು ಪಾರ್ವತಿ ದೀಪಿಕಾ ದಾಸ್ ಅಭಿನಯದ ಬಹುನಿರೀಕ್ಷಿತ ಸಿನಿಮಾವಾಗಿತ್ತು ಚಿತ್ರಕ್ಕೆ ಕಿಚ್ಚ ಸಾಥ್ ನೀಡಿದ್ರು ಅಂದುಕೊಂಡಂತೆ ಸಿನಿಮಾ ಸದ್ದು ಮಾಡಿಲ್ಲ.
ರಾಕ್ಷಸ

ರಾಕ್ಷಸ ಪ್ರಜ್ವಲ್ ದೇವರಾಜ್ ಅಭಿನಯದ ಸಸ್ಪೆನ್ಸ್ ಥ್ರೀಲರ್ ಸಿನಿಮಾ. ಭಯಾನಕ ಕಥಾಹಂದರ ಹೊಂದಿರೋ ಈ ಸಿನಿಮಾದತ್ತ ಸಿನಿಮ ಪ್ರೇಕ್ಷಕರು ಮುಖ ಮಾಡಿಲ್ಲ.
ವಾಮನ

ವಾಮನ ಡಿಬಾಸ್ ದರ್ಶನ್ ಅವರ ಆಪ್ತ ಧನ್ವೀರ್ ನಟನೆಯ ಪಕ್ಕಾ ಲವ್ ಸ್ಟೋರಿ ಹೊಂದಿರೋ ಸಿನಿಮಾ.. ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಸಾಥ್ ಕೊಟ್ಟಿದ್ರು ಚಿತ್ರಕ್ಕೆ ದರ್ಶನ್ ಅಭಿಮಾನಿಗಳು ಸಾಥ್ ನೀಡಿದ್ರು ಸಿನಿಮಾ ಓಡ್ಲೇ ಇಲ್ಲಾ.
ಫ್ಲೈರ್ ಫ್ಲೇ
ಫ್ಲೈರ್ ಫ್ಲೇ ದೊಡ್ಡಮನೆ ರಾಜಕುಮಾರಿ ಶಿವಣ್ಣನ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಪ್ರೋಡ್ಯೂಸ್ ಮಾಡಿದ ಚೊಚ್ಚಲ ಸಿನಿಮಾ, ಅಬ್ಬರದ ಪ್ರಚಾರವಿದ್ರು ಸಿನಿಮಾ ಥಿಯೇಟರ್ ಗೆ ಬಂದು ಸೌಂಡ್ ಮಾಡ್ಲಿಲ್ಲ.
ವೀರ ಚಂದ್ರ ಹಾಸ

ವೀರ ಚಂದ್ರ ಹಾಸ.. ರವಿ ಬಸ್ರೂರ್ ಸಿನಿಮಾ ಎಲ್ಲವು ಅಂದುಕೊಂಡಂತೆ ಆಗಿದ್ರೆ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗ್ತಿತ್ತು ಬಟ್ ಬ್ಯಾಟ್ ಲಕ್ ಹಿಟ್ಟೇ ಆಗಲಿಲ್ಲ.
ಜೂನಿಯರ್

ಜನಾರ್ದನ್ ರೆಡ್ಡಿ ಮಗ ಕಿರೀಟಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಕಿರೀಟಿ ಜೊತೆ ತೆರೆ ಹಂಚಿಕೊಂಡಿದ್ದು ಮಿಲ್ಕಿ ಬ್ಯೂಟಿ ಶ್ರೀಲೀಲಾ, ಹಿಟ್ ಕೊಡುತ್ತೆ ಅಂತ ಸಾಕಷ್ಟು ನಿರೀಕ್ಷೆ ಇಟ್ಕೊಂಡಿದ್ದ ಚಿತ್ರತಂಡಕ್ಕೆ 2 ವಾರಕ್ಕೆ ಆಗ್ಲೇ ಸಿನಿಮಾ ನಿರಾಸೆ ಮೂಡಿಸಿದೆ.
ವಿಶ್ಣು ಪ್ರಿಯ
ವಿಶ್ಣು ಪ್ರಿಯ ಕಣ್ಸನ್ನೆ ನಟಿ ಪ್ರಿಯಾ ವಾಪಿಯರ್ ಹಾಗೂ ಕೆ ಮಂಜು ಪುತ್ರ ಶ್ರೇಯಸ್ ಮಂಜು ಅಭಿನಯದ ಸಿನಿಮಾ. ಆ ಸಮಯದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಸಿನಿಮಾವಾದ್ರು ಥಿಯೇಟರ್ ನಲ್ಲಿ ಸಾಕಷ್ಟು ಸದ್ದು ಮಾಡಿಲ್ಲ.
ಸೂತ್ರದಾರಿ

ಚಂದನ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭುನಯಿಸಿದ ಸಿನಿಮಾ ಗಾಂಧಿನಗರದಲ್ಲಿ ಸಖತ್ತಾಗಿ ಸೌಂಡ್ ಮಾಡುತ್ತೆ ಅನ್ಕೊಂಡ್ರೆ ಜನ ಥಿಯೇಟರ್ ಕಡೆ ಮುಖ ಮಾಡಲೇ ಇಲ್ಲ.
ನಾನು ಮತ್ತು ಗುಂಡ 2

ಅಂದಹಾಗೆ, ನಾನು ಮತ್ತು ಗುಂಡ 2 ಪ್ರಾಣಿ ಮತ್ತು ಮಾನವನ ಅವಿನಾಭಾವ ಸಂಬಂಧವನ್ನು ಹೇಳುವ ಸಿನಿಮಾ, ರಿಪ್ಪನ್ ಸ್ವಾಮಿ ರಾಘು ವಿಜಿ ಅಭಿನಯದ ಚಿತ್ರ ಬಿಡುಗಡೆಯಾದ ನಂತರದಲ್ಲಿ ಕಾಂಟ್ರುವರ್ಸಿ ಆಯಿತಾದರು ಸಿನಿಮಾವನ್ನು ಪ್ರೇಕ್ಷಕರು ಒಪ್ಕೊಂಡಿಲ್ಲ.
GST

GST ಬಹಳ ವರ್ಷಗಳ ನಂತರ ಸೃಜನ್ ಲೋಕೆಷ್ ಮತ್ತು ಅವರ ಮಗ ಮುಖ್ಯ ಭೂಮಿಕೆಯಲ್ಲಿ ನಟಿಸಿದ ಸಿನಿಮಾ ಬಟ್ ನಿರೀಕ್ಷೆಯ ಮಟ್ಟವನ್ನು ರೀಚ್ ಮಾಡ್ಲೇ ಇಲ್ಲ.
ಅಂದೊಂದಿತ್ತು ಕಾಲ

ಅಂದೊಂದಿತ್ತು ಕಾಲ, ದೊಡ್ಮನೆ ಕುಡಿ ವಿನಯ್ ಹಾಗೂ ಅದಿತಿ ಪ್ರಭುದೇವಾ ಅಭಿನಯದ ಸಿನಿಮಾ ಚಿತ್ರದ ಹಾಡು ಎಲ್ಲರ ಗಮನ ಸೆಳೆಯಿತು ಬಟ್ ಸಿನಿಮಾ ಅಂದುಕೊಂಡಂತೆ ಹಿಟ್ ಆಗ್ಲೇ ಇಲ್ಲಾ, ಇನ್ನೂ.
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ಕೋಣ, ಎಕ್ಕಾ, ರಾದೇಯಾ, ಕೊತ್ತಾಲವಾಡಿ॥ ಕುಲದಲ್ಲಿ ಕಿಳ್ಯಾವುದೋ ಹೀಗೆ ಸಾಲು ಸಾಲು ಸಿನಿಮಾಗಳು ಈ ವರ್ಷ ಅಬ್ಬರಿಸಿ ಮೂಲೆ ಗುಂಪಾದ್ವು..!
ಒಟ್ನಲ್ಲಿ.. 2025 ನಮ್ಮ ಸ್ಯಾಂಡಲ್ ವುಡ್ ಪಾಲಿಗೆ ಅಷ್ಟು ಲಕ್ ತಂದುಕೊಟ್ಟಿಲ್ಲವಾದ್ರು ಸಾಲು ಸಾಲು ಹೊಸಬರ ಸಿನಿಮಾ ಬಂದು ಸ್ಯಾಂಡಲ್ ವುಡ್ ಗೆ ಬಲವಾದ್ವು ಹೋಪ್ ಈ 2026ನಲ್ಲಿ ನಮ್ಮ ಸ್ಯಾಂಡಲ್ ವುಡ್ನಲ್ಲಿ ಒಳ್ಳೆಯ ಸಿನಿಮಾ ಬಂದು ನಮ್ಮನ್ನೆಲ್ಲ ರಂಜಿಸಲಿ.