ಕರಿಕಾಡ ಸಿನಿಮಾದ ʼರತುನಿ ರತುನಿʼ ಸಾಂಗ್ ರಿಲೀಸ್
ಗಿಲ್ಲಿ ವೆಂಕಟೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಿಕಾಡ ಸಿನಿಮಾವು ಫೆಬ್ರವರಿ 6 ರಂದು ತೆರೆ ಮೇಲೆ ಬಿಡುಗಡೆ ಹೊಂದಲಿದೆ.ಕಾಡ ನಟರಾಜ್ ಹಾಗು ನಿರೀಕ್ಷಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಮೊದಲ ಹಾಡು ಕಬ್ಬಿನ ಜಲ್ಲೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.ಇದೀಗ ಚಿತ್ರತಂಡದಿಂದ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಕಂಡಿದೆ.
ʼರತುನಿ ರತುನಿʼ ಎನ್ನುವ ಐಟಂ ಸಾಂಗ್ ಇಂದು ಬಿಡುಗಡೆ ಕಾಣಿದೆ.ಈ ಹಾಡಿನಲ್ಲಿ ಹಿಂದಿಯ ಪ್ರಖ್ಯಾತ ಶೋ ಗಳಾದ ರೋಡಿಸ್ ಹಾಗು ಬಿಗ್ ಬಾಸ್ 12 ರ ಸ್ಪರ್ಧಿ ಕೃತಿ ವರ್ಮ ,ಕಾಡ ನಟರಾಜ್ ಅವರ ಜತೆಗೆ ಸ್ಟೆಪ್ ಹಾಕಿದ್ದಾರೆ.ಕೃತಿ ವರ್ಮ ಅವರು ಜಿಎಸ್ಟಿ ಇನ್ ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು,ಯಾವಾಗ ರೋಡಿಸ್ ಗೆ ಬಂದರೋ ಅದಾದ ಮೇಲೆ ಎಂಟರ್ಟೈನ್ ಇನ್ಡಸ್ಟ್ರಿ ಮೇಲೆ ತಮ್ಮ ಗಮನವನ್ನು ಹರಿಸಿದರು.ಇದೀಗ ಈ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಸಿನಿರಂಗಕ್ಕೆ ಪಾರ್ದಪಣೆ ಮಾಡಿದ್ದಾರೆ
ಈ ಹಾಡನ್ನು ಐಶ್ವರ್ಯ ರಂಗರಾಜನ್ ಹಾಗು ಶಶಾಂಕ್ ಶೇಶಗಿರಿ ಧನಿಯನ್ನ ನೀಡಿದ್ದು,ಶಶಾಂಕ್ ಶೇಶಗಿರಿಯವರೇ ಸಂಗೀತ ನಿರ್ದೇಶನ ಮಾಡಿದ್ದಾರೆ.ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.