ಪಿಚ್ಚರ್ UPDATE

ಅಂಬಿ ಫೆವರೇಟ್‌, ರಜಿನಿ ಸ್ನೇಹಿತ ನಟ ಲಕ್ಷ್ಮಣ್‌ ನಿಧನ

ಅಂಬಿ ಫೆವರೇಟ್‌, ರಜಿನಿ ಸ್ನೇಹಿತ ನಟ ಲಕ್ಷ್ಮಣ್‌ ನಿಧನ
  • PublishedJanuary 23, 2023

ಕನ್ನಡ ಸಿನಿಮಾರಂಗದ ಹಿರಿಯ ನಟ ಲಕ್ಷ್ಮಣ್‌ ನಿಧನರಾಗಿದ್ದಾರೆ…ಕನ್ನಡ ಚಿತ್ರರಂಗದಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಚಿತ್ರದಲ್ಲಿ ಲಕ್ಷ್ಮಣ್‌ ಅಭಿನಯ ಮಾಡಿದ್ದರು…ಖಳನಟನಾಗಿಯೇ ಗುರುತಿಸಿಕೊಂಡಿದ್ದ ಲಕ್ಷ್ಮಣ್‌ ಅಂಬರೀಶ್‌ ಫೆವರೇಟ್‌ ನಟನಾಗಿದ್ದರು.. 87 ವರ್ಷ ವಯಸ್ಸಾಗಿದ್ದ ಲಕ್ಷ್ಮಣ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ…ಮೂಡಲಪಾಳ್ಯದಲ್ಲಿ ನಿವಾಸದಲ್ಲಿ ಲಕ್ಷಣ್‌ ಅವ್ರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ…

ಲಕ್ಷ್ಮಣ್‌ ಅಂಬರೀಶ್‌ , ವಿಷ್ಣುವರ್ಧನ್‌ , ರಾಜ್‌ ಕುಮಾರ್‌ ಸೇರಿದಂತೆ ಅನೇಕ ದಿಗ್ಗಜರ ಜೊತೆ ಅಭಿನಯ ಮಾಡಿದ್ದಾರೆ…ಪುನೀತ್‌ ರಾಜ್‌ ಕುಮಾರ್‌ ಜೊತೆಯಲ್ಲಿ ರಣವಿಕ್ರಮ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು…ಮಲ್ಲ, ಯಜಮಾನ, ಸೂರ್ಯವಂಶ, ಸಾಂಗ್ಲಿಯಾನ, ಸೇರಿದಂತೆ ಸಾಕಷ್ಟು ಚಿತ್ರದಲ್ಲಿ ನಟಿಸಿದ್ದು ಪೊಲೀಸ್‌ ಅಧಿಕಾರಿ ಪಾತ್ರಗಳು ಲಕ್ಷ್ಮಣ್‌ ಅವ್ರನ್ನ ಹೆಚ್ಚಾಗಿ ಹುಡುಕಿಕೊಂಡು ಬರ್ತಿತ್ತು

Written By
Kannadapichhar