ಪಿಚ್ಚರ್ SPECIAL

ಜರ್ಮನಿಯಲ್ಲಿ ಅಪ್ಪುಗಾಗಿ ಅದ್ದೂರಿ ಕನ್ನಡ ರಾಜ್ಯೋತ್ಸವ.

ಜರ್ಮನಿಯಲ್ಲಿ ಅಪ್ಪುಗಾಗಿ ಅದ್ದೂರಿ ಕನ್ನಡ ರಾಜ್ಯೋತ್ಸವ.
  • PublishedNovember 28, 2022

ನವೆಂಬರ್ ೧೯, ೨೦೨೨ ರಂದು ಜರ್ಮನಿಯ ಮ್ಯೂನೀಕ್ ನಗರದಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು. ಇದರಲ್ಲಿ 680ಕ್ಕು ಹೆಚ್ಚಿನ ಕನ್ನಡಿಗರು ಭಾಗವಹಿಸಿದ್ದರು. 100 ಕ್ಕೂ ಹೆಚ್ಚು ಸ್ವಯಂಸೇವಕರು ಇದನ್ನು ಆಯೋಜಿಸಲಾಗಿದ್ದು, ಇದು ಜರ್ಮನಿಯಲ್ಲಿ ನಡೆದ ಅದ್ದೂರಿ ರಾಜ್ಯೋತ್ಸವ ಎಂದು ಹೇಳಲಾಗಿದೆ.

ಈ ಉತ್ಸವವನ್ನು ಕರ್ನಾಟಕ ರತ್ನ Dr. ಪುನೀತ್ ರಾಜಕುಮಾರ್ ಅವರಿಗೆ ಸಮರ್ಪಿಸಲಾಯ್ತು ಈ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜಕುಮಾರ್, ರಮೇಶ್ ಅರವಿಂದ್ ಸೇರಿದಂತೆ ಅನೇಕ ಸಿನಿಮಾ ನಟರು ವಿಡಿಯೋ ಮೂಲಕ ಶುಭಕೋರಿದರು.

ಅದ್ದೂರಿ ಡೊಳ್ಳು ವಾದ್ಯಗಳಿಂದ ಭುವನೇಶ್ವರಿ ತಾಯಿಯನ್ನು ಸ್ವಯಂಸೇವಕರು ಮಾಡಿದ್ದ ಆನೆ ಅಂಬಾರಿಯ ಮೇಲೆ ಸ್ವಾಗತಿಸಿದರು.ಭರತನಾಟ್ಯ, ಹುಲಿಕುಣಿತ, ಕೊಡವರ ನೃತ್ಯ ಸೇರಿದಂತೆ ಕರ್ನಾಟಕದ ವೈಶಿಷ್ಟ್ಯವನ್ನು ಪ್ರದರ್ಶಿಸುವಂತಹ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅದರಲ್ಲಿ ಕರ್ನಾಟಕದ ಸಂಸ್ಕೃತಿ, ನೃತ್ಯ, ತಿನಿಸುಗಳು, ಪ್ರವಾಸಿ ತಾಣಗಳು ಬಗ್ಗೆ ನೃತ್ಯ, ನಾಟಕದ ಮೂಲಕ ಜನರಿಗೆ ತಿಳಿಸಿದ ಕಾರ್ಯಕ್ರಮ ಇದಾಗಿತ್ತು “ನಾನು ಕಂಡ ಕರುನಾಡು” ಎಂಬ “ಕನ್ನಡ ಮ್ಯೂಸಿಕಲ್” ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದು ಜರ್ಮನಿಯಲ್ಲಿ ನಡೆದ ಮೊಟ್ಟ ಮೊದಲ “ಕನ್ನಡ ಮ್ಯೂಸಿಕಲ್” .

ಈ ಉತ್ಸವ ಅದ್ದೂರಿ ಯಶಸ್ಸು ಕಂಡಿದ್ದು, ನಮ್ಮ ಭಾಷೆ, ನೆಲವನ್ನು ಸಂಭ್ರಮಿಸುವ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಮುಂದೆಯೂ ಮಾಡಲಿದ್ದೇವೆ ಎನ್ನುವುದು ಮ್ಯೂನಿಕ್ ಕನ್ನಡಿಗರ ಮಾತಾಗಿದೆ.

Written By
Kannadapichhar