ಕನ್ನಡ ದ್ವಜಕ್ಕೆ ಬೆಂಕಿ ಹಚ್ಚಿದವರ ವಿರುದ್ದ ಶಿವಣ್ಣ ಗರಂ!
ಕನ್ನಡ ಭಾಷೆ, ನೆಲೆ, ಜಲದ ವಿಷಯ ಬಂದಾಗ ಡಾ. ರಾಜ್ಕುಮಾರ್ ಕುಟುಂಬ ಸದಾ ಮುಂದಿರುತ್ತದೆ. ಗೋಕಾಕ್ ಚಳುವಳಿ ಕಾಲದಿಂದಲೂ ಈ ಮಾತು ಸಾಬೀತಾಗಿದೆ. ಈಗ ಕರುನಾಡಿದ ಧ್ವಜ ಸುಟ್ಟು ಹಾಕಿದ ಕಿಡಿಗೇಡಿಗಳ ವಿರುದ್ಧ ಶಿವಣ್ಣ ಗರಂ ಆಗಿದ್ದಾರೆ., ಅದರಲ್ಲು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ದುಖಃದಲ್ಲಿದ್ದರೂ, ಶಿವರಾಜಕುಮಾರ್ ನಾಡ ದ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ನಮ್ಮ ನಾಡ ದ್ವಜಕ್ಕೆ ಬೆಂಕಿ ಹಚ್ಚಿದವರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ ಶಿವಣ್ಣ.
‘ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ’ ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ.