ಪಿಚ್ಚರ್ UPDATE

ಕನ್ನಡದ ಮೊಟ್ಟ ಮೊದಲ ಪ್ಯಾರ್ಲಲ್ ಲೈಫ್‌ ಸಿನಿಮಾ ಹೆಜ್ಜಾರು

ಕನ್ನಡದ ಮೊಟ್ಟ ಮೊದಲ ಪ್ಯಾರ್ಲಲ್ ಲೈಫ್‌ ಸಿನಿಮಾ ಹೆಜ್ಜಾರು
  • PublishedNovember 2, 2022

ಸ್ಯಾಂಡಲ್‌ ವುಡ್‌ ನಲ್ಲಿ ಈಗ ಹೊಸ ಹೊಸ ಎಕ್ಸ್‌ ಪೆರಿಮೆಂಟ್‌ ಚಿತ್ರಗಳು ಬರ್ತಾನೇ ಇವೆ.. ಕಂಟೆಂಟ್‌ ವಿಚಾರದಲ್ಲಿ ಕನ್ನಡ ಸಿನಿಮಾರಂಗವನ್ನ ವಿಶ್ವದೆಲ್ಲೆಡೆ ಹಾಡಿ ಹೊಗಳುತ್ತಿದ್ದಾರೆ…ಈಗ ಇಂತದ್ದೆ ಹೊಸತನಕ್ಕೆ ಸೇರಿಕೊಳ್ಳೊ ಸಿನಿಮಾ ಹೆಜ್ಜಾರು …ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೆಜ್ಜಾರು ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದ್ದು ಸಿನಿಮಾವನ್ನ ಹರ್ಷಪ್ರಿಯ ನಿರ್ದೇಶನ ಮಾಡುತ್ತಿದ್ದಾರೆ…

ಧರ್ಮಸ್ಥಳದ ಮಂಡತ್ಯಾರು ಸುತ್ತಾ ಮುತ್ತಾ ಸಿನಿಮಾದ ಚಿತ್ರೀಕರಣ ನಡೆದಿದ್ದು ಹೆಜ್ಜಾರು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದೆ..ಇನ್ನು ಸಿನಿಮಾವನ್ನ ರಾಮ್‌ ಜಿ ನಿರ್ಮಣ ಮಾಡಿದ್ದಾರೆ….ಚಿತ್ರದಲ್ಲಿ ಅಭಿ ಆಳ್ವಾ, ಲಿಯಾ ನಿಲ್ಲಾ ಶ್ವೇತಾ ಡಿಸೋಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು ಇದೇ ಮೊದಲ ಬಾರಿಗೆ ನವೀನ್‌ ಕೃಷ್ಣ ನೆಗೆಟಿವ್‌ ಶೇಡ್‌ ನಲ್ಲಿ ಮಿಂಚ್ತಿದ್ದಾರೆ..

ಇದು ಕನ್ನಡದ ಮೊಟ್ಟ ಮೊದಲ ಪ್ಯಾರ್ಲಲ್ ಲೈಫ್‌ ಸಿನಿಮಾ ಆಗಿದ್ದು ಈಗಾಗಲೇ ಶೇಖಡ ೮೦ ರಷ್ಟು ಚಿತ್ರೀಕರಣ ಕಂಪ್ಲೀಟ್‌ ಆಗಿದೆ…ಇನ್ನು ಹಾಡುಗಳನ್ನಷ್ಟೇ ಬಾಕಿ ಉಳಿಸಿಕೊಂಡಿರೋ ತಂಡ ಶೀಘ್ರದಲ್ಲೇ ಚಿತ್ರೀಕರಣ ಮುಗ್ಸಿ ಜನವರಿ ಹೊತ್ತಿಗೆ ತೆರೆ ಮೇಲೆ ಸಿನಿಮಾ ತರುವ ಪ್ರಯತ್ನದಲ್ಲಿದೆ…

ಇನ್ನು ಈ ಚಿತ್ರದ ನಿರ್ದೇಶಕ ಹರ್ಷಪ್ರಿಯ ಜೀ ವಾಹಿನಿಯಲ್ಲಿ ಫಿಕ್ಷನ್‌ ಹೆಡ್‌ ಆಗಿ ಕೆಲಸ ನಿರ್ವಹಿಸಿದ್ದಾರೆ …ಈಗಾಗಲೇ ಜನರ ಮನಸ್ಸು ಗೆದ್ದಿರೋ ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು, ಡಾ ಬಿ ಆರ್‌ ಅಂಬೇಡ್ಕರ್‌ , ಪುಟ್ಟಗೌರಿ ಮದುವೆ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನ ಬರೆದಿದ್ದಾರೆ..ಸಾಕಷ್ಟು ಧಾರಾವಾಹಿಗಳ ಸ್ಕ್ರೀನ್‌ ಪ್ಲೇ ಕೂಡ ಬರೆದಿದ್ದಾರೆ…ಒಟ್ಟಾರೆ ಸ್ಮಾನ್‌ ಸ್ಕ್ರೀನ್‌ ನಲ್ಲಿ ಸಕ್ಸಸ್‌ ಕೊಂಡಿರೋ ಹರ್ಷಪ್ರಿಯ ಈಗ ಬಿಗ್‌ ಸ್ಕ್ರೀನ್‌ ನಲ್ಲಿ ಮ್ಯಾಜಿಕ್‌ ಶುರು ಮಾಡಲಿದ್ದಾರೆ…..

Written By
Kannadapichhar