ಕಿಸ್ ನಾಯಕನಿಗೆ ಸುಕ್ಕ ಸೂರಿ ಆಕ್ಷನ್ ಕಟ್ ..!

ಸ್ಯಾಂಡಲ್ ವುಡ್ ಟಾಪ್ ನಿರ್ದೇಶಕರಲ್ಲಿ ಸೂರಿ ಕೂಡ ಒಬ್ಬರು…ತನ್ನದೇ ಸ್ಟೈಲ್ ನಲ್ಲಿ ಸಿನಿಮಾ ಮಾಡಿ ಪ್ರೇಷಕರನ್ನ ಮೆಚ್ಚಿಸೋ ತಾಕತ್ತು ಇರೋ ನಿರ್ದೇಶಕ ದುನಿಯಾ ಸೂರಿ…ಕನ್ನಡದಲ್ಲಿ ಕಲ್ಟ್ ..ರಾ ಸಬ್ಜೆಕ್ಟ್ ಬ್ರ್ಯಾಂಡ್ ಅಂಬಾಸಿಡರ್ ದುನಿಯಾ ಸೂರಿ ಅಂತಾರೆ ಸಿನಿಮಾ ಪ್ರೇಮಿಗಳು…
ಸದ್ಯ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ನಿರ್ದೇಶಕ ದುನಿಯಾ ಸೂರಿ…ನಿರ್ದೇಶಕ ದುನಿಯಾ ಸೂರಿ ಜಯಣ್ಣ ಕಂಬೈನ್ಸ್ ನಿರ್ಮಾಣದ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ….

ಈ ಸಿನಿಮಾಗೆ ಕಿಸ್ ಚಿತ್ರದ ಮೂಲಕ ಭರವಸೆ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ವಿರಾಟ್ ನಾಯಕನಾಗಲಿದ್ದಾರೆ…ಸದ್ಯ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಹಾಗೂ ನಾಯಕ ನಟ ಘೋಷಣೆ ಆಗಿದ್ದು ಶೀಘ್ರದಲ್ಲೇ ಸಿನಿಮಾ ಬಗ್ಗೆ ಅಪ್ಡೇಟ್ ಕೊಡಲಿದ್ದಾರೆ ನಿರ್ಮಾಪಕ ಜಯಣ್ಣ…

ಸಾಮಾನ್ಯವಾಗಿ ನಿರ್ದೇಶಕ ಸೂರಿ ಒಂದು ಸಿನಿಮಾ ರಿಲೀಸ್ ಆದ ನಂತ್ರವೇ ಮತ್ತೊಂದು ಸಿನಿಮಾ ಅನೌನ್ಸ್ ಮಾಡೋದು ಆದ್ರೆ ಇದೇ ಮೊದಲ ಬಾರಿಗೆ ತಮ್ಮ ನಿರ್ದೇಶನದ ಚಿತ್ರ ಬಿಡುಗಡೆ ಆಗುವ ಮುನ್ನವೇ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ…

ಇನ್ನು ನಟ ವಿರಾಟ್ ಈಗಾಗಲೇ ಇಂಡಸ್ಟ್ರಿಯಲ್ಲಿ ಟ್ಯಾಲೆಂಟೆಡ್ ಹುಡುಗನಾಗಿ ಗುರುತಿಸಿಕೊಂಡಿದ್ದು ಸದ್ಯ ದಿನಕರ್ ನಿರ್ದೇಶನದ ರಾಯಲ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ..ಇದು ಮುಗಿದ ನಂತ್ರ ಸೂರಿ ನಿರ್ದೇಶನದ ಚಿತ್ರದಲ್ಲಿ ಭಾಗಿ ಆಗಲಿದ್ದಾರೆ….