ಪಿಚ್ಚರ್ SPECIAL ಪಿಚ್ಚರ್ UPDATE

ಪೆಂಟಗನ್‌ ಕಥಾ ಸಂಗಮಕ್ಕೆ ಕಿಶೋರ್‌ ಎಂಟ್ರಿ

ಪೆಂಟಗನ್‌ ಕಥಾ ಸಂಗಮಕ್ಕೆ ಕಿಶೋರ್‌ ಎಂಟ್ರಿ
  • PublishedJanuary 18, 2023

ಪೆಂಟಗನ್‌ ಮೂಲಕ ಐದು ವಿಭಿನ್ನ ಕಥೆಯನ್ನ ಪ್ರೇಕ್ಷಕರ ಮುಂದೆ ತರಲು ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ…ಈಗಾಗಲೇ ನಾಲ್ಕು ಕಥೇಯ ಟೀಸರ್‌ ಬಿಡುಗಡೆ ಆಗಿದ್ದು ಸದ್ಯ ಐದನೇ ಕಥೆಯ ಟೀಸರ್‌ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ…

ಪೆಂಟಗನ್‌ ನ ಐದನೇ ಭಾಗದ ಕಥೆಗೆ ನಿರ್ದೇಶಕ ಕಮ್‌ ನಿರ್ಮಾಪಕ ಗುರು ದೇಶಪಾಂಡೆ ಅವ್ರೇ ಆಕ್ಷನ್‌ ಕಟ್‌ ಹೇಳಿದ್ದಾರೆ …ಸದ್ಯ ರಿಲೀಸ್‌ ಆಗಿರೋ ಪೋಸ್ಟರ್‌ ನೋಡ್ತಿದ್ರೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗುತ್ತಿದೆ…ಈಗಾಗಲೇ ರಿಲೀಸ್‌ ಆಗಿರೋ ಟೀಸರ್‌ ಗಳು ಭಾರಿ ಕ್ಯೂರಿಯಾಸಿಟಿ ಮೂಡಿಸಿದ್ದು, ಈ ಪಾರ್ಟ್‌ ನಲ್ಲಿ ನಟ ಕಿಶೋರ್‌ ಲುಕ್‌ ಇಂಟ್ರೆಸ್ಟಿಂಗ್‌ ಆಗಿದೆ…ಕಿಶೋರ್‌ ಜೊತೆಯಲ್ಲಿ ನಟ ಪೃಥ್ವಿ ಅಂಬರ್‌ ಕೂಡ ಚಿತ್ರದಲ್ಲಿ ನಟಿಸಿದ್ದಾರೆ…ಇನ್ನು ಉಳಿದಂತೆ ನಾಲ್ಕು ಭಾಗಗಳ ಕಥೆಯನ್ನ ಆಕಾಶ್‌ ಶ್ರೀವತ್ಸ, ರಾಘು ಶಿವಮೊಗ್ಗ, ಕಿರಣ್‌ ಕುಮಾರ್‌ , ಚಂದ್ರ ಮೋಹನ್‌ ನಿರ್ದೇಶಿಸಿದ್ದಾರೆ…

Written By
Kannadapichhar