ಸಪ್ತಪದಿ ತುಳಿಯಲಿದ್ದಾರೆ ಕಾವ್ಯಾ ಶಾ
ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಅಭಿನಯದ ಮೂಲಕ ಗುರುತಿಸಿಕೊಂಡಿರುವ ನಟಿ ಕಾವ್ಯಾ ಶಾ .. ಮಿಸ್ಟರ್&ಮಿಸೆಸ್ ರಾಮಾಚಾರಿ. ಮೂಕಜ್ಜಿಯ ಕನಸು. ತಮಿಳಿನ ಥಾರೈ ಥಪ್ಪಟ್ಟೈ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿರುವಂತಹ ನಟಿ ಕಾವ್ಯಾ ಶಾ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ..





ಹೌದು ಕಾವ್ಯಾ ಶಾ ತಮ್ಮ ಬಹುದಿನದ ಗೆಳೆಯನ ಜೊತೆ ವಿವಾಹವಾಗಲು ನಿರ್ಧಾರ ಮಾಡಿದ್ದು ಏಪ್ರಿಲ್ ಎರಡನೇ ವಾರದಲ್ಲಿ ಕಾವ್ಯ ಅವರ ವಿವಾಹ ಜರುಗಲಿದೆ




ಕಾವ್ಯ ಮದುವೆ ಆಗುತ್ತಿರುವ ಹುಡುಗನ ಹೆಸರು ವರುಣ್ ..ವರುಣ್ ಈಗಾಗಲೇ ಸಾಕಷ್ಟು ಎಂಟರ್ ಟೈನ್ ಮೆಂಟ್ ಚಾನೆಲ್ ಗಳಲ್ಲಿ ರಿಯಾಲಿಟಿ ಶೋಗಳನ್ನ ಆಯೋಜನೆ ಮಾಡುವ ಮೂಲಕ ಗುರುತಿಸಿಕೊಂಡಿದ್ದು ಸ್ಯಾಂಡಲ್ ಸ್ಟಾರ್ ಗಳಿಗೆ ಅತ್ಯಾಪ್ತರಾಗಿದ್ದಾರೆ…ಇನ್ನು ಕಾವ್ಯಾ ಶಾ ನಟನೆಯ ಜೊತೆಗೆ ತಮ್ಮದೇ ಆದ ಫಿಟ್ನೆಸ್ ಸ್ಟುಡಿಯೋ ಕೂಡ ನಡೆಸುತ್ತಿದ್ದಾರೆ ..




ಕಾವ್ಯ ಶಾ ಕನ್ನಡ, ತಮಿಳು ಹಾಗೂ ಹಿಂದಿ ಸಿನಿಮಾದಲ್ಲಿ ಅಭಿನಯಿಸಿ ಅಲ್ಲಿಯ ಸ್ಟಾರ್ ಗಳಿಗೂ ಕೂಡ ಸ್ನೇಹಿತರಾಗಿರುವ ಕಾರಣದಿಂದ ಕಾವ್ಯ ಹಾಗೂ ವರುಣ್ ಮದುವೆಗೆ ಸ್ಯಾಂಡಲ್ ವುಡ್ ಕಾಲಿವುಡ್ ಹಾಗೂ ಬಾಲಿವುಡ್ ನ ಸಿನಿಮಾ ಕಲಾವಿದರು ಕೂಡ ಬರುವ ಸಾಧ್ಯತೆ ಇದೆ …