ಮೂಗುತಿ ಚುಚ್ಚಿದ್ದು ಹರಿಪ್ರಿಯಾಗೆ ನೋವಾಗಿದ್ದು ಮತ್ಯಾರಿಗೂ !

ನಟಿ ಹರಿಪ್ರಿಯಾ ಅದ್ಯಾಕೋ ಸೈಲೆಂಟ್ ಆಗ್ವಿಟ್ಟಿದ್ದಾರೆ…ಪೆಟ್ರೋಮ್ಯಾಕ್ಸ್ ಸಿನಿಮಾ ಆದ್ಮೆಲೆ ಕೊಂಚ ಬ್ರೇಕ್ ತೆಗೆದುಕೊಂಡಂಗೆ ಕಾಣ್ತಾರೆ…ಹರಿಪ್ರಿಯಾ ಆಕ್ಟ್ ಮಾಡಿರೋ ಇನ್ನೂ ನಾಲ್ಕು ಸಿನಿಮಾಗಳು ರಿಲೀಸ್ ಗೆ ರೆಡಿ ಇದೆ…ಇನ್ನು ಅಮ್ಮ, ಅಣ್ಣ ಹಾಗೂ ತಮ್ಮ ಪೆಟ್ ಗಳ ಜೊತೆ ಜಾಲಿಯಾಗಿ ಟೈಂ ಸ್ಪೆಂಡ್ ಮಾಡ್ತಿದ್ದಾರೆ ಹರಿಪ್ರಿಯಾ….
ಈ ಮಧ್ಯೆ ಸೋಷಿಯಲ್ ಮಿಡಿಯಾದಲ್ಲಿ ಆಗೊಂದು ಹೀಗೊಂದು ಫೋಟೋ ವಿಡಿಯೋ ಅಪ್ಡೇಟ್ ಮಾಡೋ ಹರಿಪ್ರಿಯಾ ಮೊನ್ನೆ ಏಕಾ ಏಕಿ ಒಂದ್ ವಿಡಿಯೋ ಶೇರ್ ಮಾಡೋ ಮೂಲಕ ಎಲ್ಲರಿಗೂ ಶಾಕ್ ಕೊಟ್ಟುಬಿಟ್ರು…ಈ ವಿಡಿಯೋ ನೋಡಿದ ಅದೆಷ್ಟೋ ಹರಿಪ್ರಿಯಾ ಅಭಿಮಾನಿಗಳು ಸಖತ್ ನೊಂದುಕೊಂಡ್ರು…
ಯೆಸ್ ಅಷ್ಟಕ್ಕೂ ಹರಿಪ್ರಿಯಾ ಶೇರ್ ಮಾಡಿದ್ದು ಮೂಗುತಿ ಚುಚ್ಚಿಸಿಕೊಂಡ ವಿಡಿಯೋ…ಮೂಗುತಿ ಚುಚ್ಚಿದಾಗ ಹರಿಪ್ರಿಯಾ ಅವ್ರಿಗೆ ಅದೆಷ್ಟು ನೋವಾಯ್ತೋ ಗೊತ್ತಿಲ್ಲ ..ಆದ್ರೆ ವಿಡಿಯೋ ನೋಡಿದ ಹರಿಪ್ರಿಯಾ ಅಭಿಮಾನಿಗಳಂತು ನೋವಿನಿಂದ ಬೇಸರ ಪಡ್ಕೊಂಡಿದ್ದಾರೆ…ಅಯ್ಯೋ ನಮ್ ಹೀರೋಯಿನ್ ಗೆ ನೋವಾಯ್ತು ಅಂತ ವಿಡಿಯೋ ನೋಡಿ ಕಮೆಂಟ್ ಮಾಡ್ತಿದ್ದಾರೆ…ಒಟ್ನಲ್ಲಿ ಹರಿಪ್ರಿಯಾ ಏನೋ ಮೂಗು ಚುಚ್ಚಿಸಿಕೊಂಡು ಸರ್‌ಪ್ರೈಸ್ ಕೊಟ್ರು… ಅದನ್ನ ನೋಡಿ ಫ್ಯಾನ್ಸ್ ಕೆಲವ್ರು ಬೇಸರ ಮಾಡಿಕೊಂಡ್ರೆ ಇನ್ನು ಕೆಲವ್ರು ಸ್ಯಾಂಡಲ್ ವುಡ್ ನ ಮಿನುಗುತಾರೆಗೆ ಹರಿಪ್ರಿಯಾ ಅವ್ರನ್ನ ಹೋಲಿಕೆ ಮಾಡ್ತಿದ್ದಾರೆ….