ಪಿಚ್ಚರ್ UPDATE

ನಟಿ ಅಭಿನಯಾ ಅರೆಸ್ಟ್?

ನಟಿ ಅಭಿನಯಾ ಅರೆಸ್ಟ್?
  • PublishedDecember 14, 2022

೧೯೮೪ ಸಿನಿಮಾ ರಂಗ ಉತ್ತುಂಗದಲ್ಲಿದ್ದ ಕಾಲವದು ಕಾಶೀನಾಥ್ ಎಂಬ ಕರಾವಳಿಯ ಪ್ರತಿಭೆಯ ಹಿಟ್ ಸಿನಿಮಾಗಳು ಗಲ್ಲಾಪೆಟ್ಟಿಗೆಯನ್ನ ಸೂರೆ ಮಾಡುತ್ತಿದ್ದ ಕಾಲವದು, ತಮ್ಮ ಹಿಟ್ ಚಿತ್ರದ ಲೀಸ್ಟ್ಗೆ ಮತ್ತೊಂದು ಸಿನಿಮಾ ಕೊಡೋ ಕಾತುರದಲ್ಲಿದ್ದ ಅವರಿಗೆ ಒಮ್ಮೆ ಕಾಶೀನಾಥ್ ಅವರ vತಾಯಿಹೇಳಿದ ಕಥೆಯೊಂದರ ಎಳೆಯನ್ನ ಇಟ್ಟುಕೊಂಡು ಅವರು ಶುರುಮಾಡಿದ ಅನುಭವ ಸಿನಿಮಾಕ್ಕೆ ನಾಯಕಿಯ ಹುಡುಕಾಟ ನಡೆದಿತ್ತು.
ಇದೇ ಸಂಧರ್ಭದಲ್ಲಿ ಅದಾಗಲೆ ಭಾಗ್ಯವಂತ,ದೇವತಾ ಮನುಷ್ಯ ಮತ್ತು ಬೆಂಕಿಯ ಬಲೆ ಸಿನಿಮಾಗಳಲ್ಲಿ ಅದಾಗಲೆ ಬಾಲನಟಿಯಾಗಿ ಅಭಿನಯಿಸಿದ ಅಭಿನಯರನ್ನ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಆ ಸಮಯದಲ್ಲಿ ಅಭಿನಯ ಅವರಿಗೆ ೧೩ ವರ್ಷ, ವಯೋ ಸಹಜ ತಮಾಷೆ ತರಲೆಗಳ ಜೊತೆ ಚಿತ್ರಮುಗಿಸಿದ ಅಭಿನಯ ಅವರಿಗೆ ಆ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಕೂಡ ಲಭಿನಸಿತು ಹೀಗೆ ಕಾಶೀನಾಥ್ ಗರಡಿಯ ಈ ಪ್ರತಿಭೆಗೆ ಅವಕಾಶಗಳೇನು ಕಡಿಮೆ ಆಗಲಿಲ್ಲ.

ಆದರೆ ೧೯೯೦ರ ನಂತರ ದೊಡ್ಡ ಬ್ರೇಕ್ ನಂತರ ಮದುವೆ ಜೀವನಕ್ಕೆ ಕಾಲಿಟ್ಟಿದ್ದ ಅಭಿನಯ ಅವರು ಮತ್ತೆ ೨೦೧೯ರಲ್ಲಿ ತೆರೆಗೆ ಬಂದ ಕ್ರಷ್ ಸಿನಿಮಾದ ಮುಖಾಂತರ ಮತ್ತೆ ಬೆಳ್ಳಿತೆರೆಗೆ ಬಂದರು ಆದರೆ ಅದರ ಮಧ್ಯೆ ನಡೆದ ಘಟನೆಗಳು ವಿಷಯಗಳು ನಮ್ನನ್ನ ಬೆಚ್ಚಿಬೀಳಿಸುತ್ತದೆ ಅದೇನೆಂದೆ ಅಭಿನಯ ಅವರ ಸೋದರನ ಮದುವೆ ಪ್ರಸಂಗ ಇದಾದ ನಂತರ ಅಭಿನಯ ಮತ್ತು ಅವರ ತಾಯಿ ಸೇರಿ ಅವರ ಅತ್ತಿಗೆಗೆ ಕೊಡಬಾರದ ಕಿರುಕುಳಗಳನ್ನ ನೀಡಿದರು ಎಂದು ಹೇಳಲಾಗುತ್ತಿದೆ ಮದುವೆ ಸಂಧರ್ಭದಲ್ಲಿ ೧ಲಕ್ಷ ವರದಕ್ಷಿಣೆ ಸೇರಿದಂತೆ ಕಾಲುಕೇಜಿ ಬಂಗಾರ ನೀಡಿರುವುದಾಗಿ ಅವರ ಅತ್ತಿಗೆ ಹೇಳಿದ್ದಾರೆ.

ವರದಕ್ಷಿಣೆ ಕಿರುಕುಳದಿಂದ ನೊಂದ ಅವರ ಅತ್ತಿಗೆ ಪ್ಯಾಮಿಲಿ ಕೋರ್ಟಿನಿಲ್ಲಿ ಕೇಸ್ ಹೂಡಿದ್ದರು..ಇದು ನಡೆದದ್ದು ಸುಮಾರು ೧೦ ವರ್ಷಗಳ ಹಿಂದೆ ಅಂದರೆ ೨೦೧೨ರಲ್ಲಿ ಇದಾದ ಬಳಿಕ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ ಇಂದು ಅಭಿನಯ ಅವರಿಗೆ ೨ ವರ್ಷ ಜೈಲುಶಿಕ್ಷೆ ಮತ್ತು ಅವರ ಸಹೋದರನನ್ನು ಕೂಡ ಶಿಕ್ಷೆಗೆ ಒಳಪಡಿಸಿ ಆದೇಶ ಹೊರಡಿಸಿದೆ.

ಅವಿನಾಶ್
ಕನ್ನಡ ಪಿಚ್ಚರ್

Written By
Kannadapichhar