ಶಿವರಾಜ್ ಕುಮಾರ್ ಆರ್ ಸಿಬಿ -ಧನುಷ್ ಚೆನೈ ಸೂಪರ್ ಕಿಂಗ್ಸ್ -ಗೆಲ್ಲೋರು ಯಾರು ?

ಸದ್ಯ ಎಲ್ಲೆಡೆ ಐಪಿಎಲ್ ಫೀವರ್ ಜೋರಾಗಿದೆ…ನಮ್ಮ ಜನ ಸಿನಿಮಾವನ್ನ ಇಷ್ಟ ಪಡುವಂತೆಯೇ ಕ್ರಿಕೆಟ್ ಅನ್ನೂ ಕೂಡ ಸಖತ್ ಇಷ್ಟ ಪಡ್ತಾರೆ…ಅದ್ರಲ್ಲೂ ಐಪಿಎಲ್ ಬಂತು ಅಂದ್ರೆ ಎಲ್ಲಾ ಕೆಲಸ ಪಕ್ಕಕ್ಕಿಟ್ಟು ಟಿವಿ ಮುಂದೆ ಕೂರ್ತಾರೆ…ಇನ್ನು ಕೆಲವ್ರಂತು ಬೆಂಗಳೂರಿನಲ್ಲಿ ಮ್ಯಾಚ್ ಇದ್ರೆ ಹೇಗಾದ್ರು ಮಾಡಿ ಟಿಕೆಟ್ ಪಡೆದು ಸ್ಟೇಟಿಯಂ ನಲ್ಲೇ ಕ್ರಿಕೆಟ್ ನೋಡ್ತಾರೆ…ಇನ್ನು ಇವತ್ತು ನಡೆಯುತ್ತಿರೋ ಹೈ ವೋಲ್ಟೇಜ್ ಮ್ಯಾಚ್ ನೋಡೋದಕ್ಕೆ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾದಿದ್ದಾರೆ…ಆರ್ ಸಿ ಬಿ ವರ್ಸಸ್ ಸಿ ಎಸ್ ಕೆ ಮ್ಯಾಚ್ ಅಂದ್ರೆನೇ ಹಾಗೆ …ಹೇಗಾದ್ರು ನಾವ್ ಇಷ್ಟ ಪಡೋ ಟೀಂ ವಿನ್ ಆಗ್ಬೇಕು ಅನ್ನೋದೇ ಎಲ್ಲಾ ಅಭಿಮಾನಿಗಳ ಆಸೆ..

ಇದು ಕೇವಲ ಸಾಮಾನ್ಯ ಜನರು ಮಾತ್ರವಲ್ಲ ಸೆಲಬ್ರೆಟಿಗಳು ಕೂಡ ತಮ್ಮದೇ ಆದ ಟೀಂ ಅಂತ ಫಿಕ್ಸ್ ಆಗಿರ್ತಾರೆ…ಅದೇ ರೀತಿ ಇಂದಿನ ಮ್ಯಾಚ್ ನೋಡೋದಕ್ಕೆ ಕರುನಾಡ ಚಕ್ರವರ್ತಿ ಸ್ಟೇಡಿಯಂ ಗೆ ಎಂಟ್ರಿಕೊಡ್ತಇದ್ದಾರೆ…ಶಿವಣ್ಣ ಆರ್ ಸಿ ಬಿ ತಂಡಕ್ಕೆ ಬೆಂಬಲಕ್ಕೆ ನಿಂತಿದ್ದಾರೆ..ಫ್ಯಾನ್ಸ್ ಜೊತೆಯಲ್ಲಿ ಈ ಸಲ ಕಪ್ ನಮ್ದೆ ಅಂತಿದ್ದಾರೆ ಹ್ಯಾಟ್ರಿಕ್ ಹೀರೋ….

ಹಾಗಾದ್ರೆ ಚೆನೈ ತಂಡಕ್ಕೆ ಯಾರು ಸಪೋರ್ಟರ್ಸ್ ಇಲ್ವಾ ಅಂತ ಕೇಳಿದ್ರೆ…ಅವ್ರ ಬೆಂಬಲಕ್ಕೂ ಸ್ಟಾರ್ ಹೀರೋ ಬಂದಿದ್ದಾರೆ…ಚೆನೈ ತಂಡ ಬೆಂಬಲಿಸೋದಕ್ಕೆ ನಟ ಧನುಷ್ ಎಂಟ್ರಿಕೊಟ್ಟಿದ್ದಾರೆ..ಅವ್ರು ಕೂಡ ಸ್ಟೇಡಿಯಂ ನಲ್ಲಿ ಶಿವಣ್ಣನ ಜೊತೆಯಲ್ಲಿ ಮ್ಯಾಚ್ ನೋಡ್ತಾರೆ ಆದ್ರೆ ಅವ್ರು ಇಷ್ಟ ಪಡೋ ತಂಡ ಮಾತ್ರ ಬೇರೆ…
ಸದ್ಯ ಧನುಷ್ ಹಾಗೂ ಶಿವಣ್ಣ ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡುತ್ತಿದ್ದು, ಇಬ್ಬರು ಒಟ್ಟಿಗೆ ಮ್ಯಾಚ್ ನೋಡ್ತಾರೆ…ಅದಕ್ಕೂ ಮುನ್ನ ಧನುಷ್ ಹಾಗೂ ತಂಡ ಶಿವರಾಜ್ ಕುಮಾರ್ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಸವಿಯಲಿದ್ದಾರೆ..ಊಟ ಉಪಚಾರ ಮುಗಿಸಿ ಇಬ್ಬರು ಒಟ್ಟಿಗೆ ಮ್ಯಾಚ್ ನೋಡಿ ಎಂಜಾಯ್ ಮಾಡಲಿದ್ದಾರೆ….