ಪಿಚ್ಚರ್ SPECIAL

ಅಮೂಲ್ಯ ಅವಳಿ ಮಕ್ಕಳಿಗೆ ಗೋಲ್ಡನ್‌ ದಂಪತಿ ಕೊಟ್ಟ ಗಿಫ್ಟ್‌ಏನು ?

ಅಮೂಲ್ಯ ಅವಳಿ ಮಕ್ಕಳಿಗೆ ಗೋಲ್ಡನ್‌ ದಂಪತಿ ಕೊಟ್ಟ ಗಿಫ್ಟ್‌ಏನು ?
  • PublishedNovember 15, 2022

ನಟಿ ಅಮೂಲ್ಯ ಹಾಗೂ ಜಗದೀಶ್‌ದಂಪತಿ ಇತ್ತೀಚಿಗಷ್ಟೇ ತಮ್ಮ ಮಕ್ಕಳ ಅದ್ದೂರಿ ನಾಮಕರಣ ಮಾಡುವ ಮೂಲಕ ಮುದ್ದು ಅವಳಿ ಮಕ್ಕಳ ಹೆಸರನ್ನ ರಿವಿಲ್‌ ಮಾಡಿದ್ದಾರೆ….ಒಬ್ಬ ಮಗನಿಗೆ ಅಥರ್ವ್‌ಎಂದು ಹೆಸರಿಟ್ಟಿದ್ರೆ ಮತ್ತೊಬ್ಬನಿಗೆ ಆಧವ್‌ಎಂದು ಹೆಸರಿಡಲಾಗಿದೆ…ಅಥರ್ವ ಎಂದರೆ ನಾಲ್ಕು ವೇದಗಳಲ್ಲಿ ಬರುವ ಒಂದು ವೇದದ ಹೆಸರಾಗಿದೆ…ಇನ್ನು ಆಧವ್‌ಎಂದರೆ ಆಳುವವನು ಎಂದರ್ಥವಂತೆ …ಹಾಗಾಗಿ ಈ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಅಮೂಲ್ಯ ಮತ್ತು ಜಗದೀಶ್‌..

ಇನ್ನು ಅಮೂಲ್ಯ ಮಕ್ಕಳ ನಾಮಕರಣ ಸಮಾರಂಭದಲ್ಲಿ ಇಡೀ ಇಂಡಸ್ಟ್ರಿಯೇ ಭಾಗಿ ಆಗಿತ್ತು…ದರ್ಶನ್‌, ಗಣೇಶ್‌, ಶಿವಣ್ಣ ಹೀಗೆ ಎಲ್ಲಾ ಸ್ಟಾರ್‌ಗಳು ಬಂದು ಮಕ್ಕಳಿಗೆ ವಿಷ್‌ ಮಾಡಿದ್ರು…ನಾಮಕರಣ ಅಂದ್ಮೆಲೆ ಸ್ಟಾರ್‌ ಗಳು ಏನ್‌ ಗಿಫ್ಟ್‌ ಕೊಟ್ರು ಅನ್ನೋ ಕ್ಯೂರಿಯಾಸಿಟಿ ಕೂಡ ಎಲ್ಲರಿಗೂ ಇರುತ್ತೆ….ಅಮೂಲ್ಯ ಮತ್ತು ಜಗದೀಶ್‌ ಇಬ್ಬರಿಗೂ ಇಂಡಸ್ಟ್ರಿಯಲ್ಲಿ ಅತ್ಯಾಪ್ತರು ಅಂದ್ರೆ.. ಗಣೇಶ್‌ ಮತ್ತು ಅವ್ರ ಪತ್ನಿ ಶಿಲ್ಪ ಗಣೇಶ್‌…ಇವ್ರ ಕಡೆಯಿಂದ ಅಮೂಲ್ಯ ಮಕ್ಕಳಿಗೆ ಗೋಲ್ಡನ್‌ ಗಿಫ್ಟ್‌ ಸಿಕ್ಕಿದೆ ….

ಗಣೇಶ್‌ ಅವ್ರ ಕಡೆಯಿಂದ ಒಬ್ಬ ಮಗನಿಗೆ ಚಿನ್ನದ ಸರ ಹಾಕಿದ್ರೆ ಇನ್ನೊಬ್ಬ ಮಗನಿಗೆ ಚಿನ್ನದ ಬಳೆಗಳನ್ನ ತೊಡಿಸಿದ್ದಾರೆ. ಈ ಫೋಟೋಗಳು ಕೂಡ ಈಗಾಗಲೇ ಸಖತ್‌ ವೈರಲ್‌ ಆಗ್ತಿದೆ…

ಇನ್ನು ಜಗದೀಶ್‌ಮನೆಯಲ್ಲಿ ನಡೆಸಿಕೊಂಡು ಬಂದಿರೋ ಪ್ರತೀತಿಯಂತೆ ಹೆಸರು ಸೆಲೆಕ್ಟ್‌ಮಾಡಿದ ನಂತ್ರ ಬಾದಿ ಚುಂಚನಗಿರಿ ಮಠದ ಸ್ವಾಮಿಗಳಿಂದ ಅನುಮತಿ ಪಡೆದು ನಾಮಕರಣ ಮಾಡಿದ್ದಾರೆ….ಅಮೂಲ್ಯ ಹಾಗೂ ಜಗದೀಶ್‌ ವಿವಾಹ ಕೂಡ ಆದಿ ಚುಂಚನಗಿರಿಯಲ್ಲಿಯೇ ನೆರವೇರಿತ್ತು… ಒಟ್ಟಾರೆ ಅದ್ದೂರಿಯಾಗಿ ನಡೆದ ನಾಮಕರಣ ಸಮಾರಂಭಕ್ಕೆ ಸಿನಿಮಾ ಸ್ಟಾರ್‌ಗಳು ಎಂಟ್ರಿಕೊಟ್ಟು ಸಂಭ್ರಮವನ್ನ ಮತ್ತಷ್ಟು ಹೆಚ್ಚು ಮಾಡಿದ್ದಾರೆ….

Written By
Kannadapichhar