‘ಕಲ್ಯಾಣವೇ ಗೌರಿ’ ಸಾಂಗ್ ರಿಲೀಸ್
ಸಪ್ತಮಿ ಗೌಡ ಹಾಗೂ ನೀನಾಸಂ ಸತೀಶ ಅವರು ನಟಿಸುತ್ತಿರುವ ಸಿನಿಮಾ ‘ ದಿ ರೈಸ್ ಆಫ್ ಅಶೋಕ ‘. ಈ ಸಿನಿಮಾವು ಇದೆ ಫೆಬ್ರವರಿ ಅಂದು ಬಿಡುಗಡೆಗೊಳ್ಳಲಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳಾದ ‘ಏಳೋ ಏಳೋ ಮಾದೇವ’ ಹಾಗೂ ‘ಯಾಕೋ ಯಾಕೋ ‘ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.ಇದೀಗ ಜನವರಿ 21 ರಂದು ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದೆ. ʼಕಲ್ಯಾಣವೇ ಗೌರಿʼ ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಈ ಹಾಡನ್ನು ಪಂಚಮ್ ಜೀವ್ ಹಾಗೂ ಶ್ವೇತ ಹೀರೇಮಠ್ ಹಾಡಿದ್ದಾರೆ.ಜೊತೆಗೆ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.