ಕಾಂತಾರ ನಂತ್ರ ಹೊಸ ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ “ಮಾನಸಿ ಸುಧೀರ್”

ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ಸದ್ದು ಮಾಡ್ತಿದೆ…ಸಿನಿಮಾ ಕಂಟೆಂಟ್ ಜೊತೆ ಚಿತ್ರದ ಪಾತ್ರದಾರಿಗಳ ಬಗ್ಗೆಯೂ ಉತ್ತಮ ರೆಸ್ಪಾನ್ಸ್ ಸಿಕ್ತಿದೆ…ಪ್ರತಿ ಪಾತ್ರವೂ ಚೆನ್ನಾಗಿ ಮೂಡಿ ಬಂದಿರೋದ್ರ ಜೊತೆ ಅವರವರ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಅನ್ನೋದು ಪ್ರೇಕ್ಷಕರ ಅಭಿಪ್ರಾಯ…ಕಾಂತಾರ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಮಿಂಚಿದ್ದ ಮಾನಸಿ ಸುಧೀರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ…ಯೆಸ್ ಮಾನಸಿ ಅಭಿನಯದ ಜುಗಲ್ ಬಂದಿ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ…

ಇಲ್ಲೂ ಕೂಡ ಮಾನಸಿ ಅವ್ರು ತಾಯಿಯ ಪಾತ್ರವನ್ನ ನಿರ್ವಹಿಸುತ್ತಿದ್ದು ಅವ್ರ ಪಾತ್ರದ ಹಾಡು ಬಿಡುಗಡೆ ಆಗಿದೆ…ಜುಗಲ್ ಬಂದಿ ಚಿತ್ರವನ್ನ ದಿವಾಕರ್ ಡಿಂಡಿಮ ನಿರ್ದೇಶನ ಮಾಡೋದ್ರ ಜೊತೆಗೆ ನಿರ್ಮಾಣವನ್ನೂ ಮಾಡ್ತಿದ್ದಾರೆ…ಬೆಂಗಳೂರಿನ ಸುತ್ತಾ ಮುತ್ತಾ ಚಿತ್ರದ ಶೂಟಿಂಗ್ ನಡೆದಿದ್ದು ಸಿನಿಮಾದಲ್ಲಿ ಯಶ್ ಶೆಟ್ಟಿ, ಸಂತೋಷ್ ಅಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ, ಮಾನಸಿ ಸುಧೀರ್ ಮುಂತಾದವರು ಅಭಿನಯಿಸಿದ್ದಾರೆ….

ಸದ್ಯ ಚಿತ್ರದ ಇಂತವರ ಸಂತಾನ ಹಾಡು ಬಿಡುಗಡೆ ಆಗಿದ್ದು ಸ್ವತಃ ದಿವಾಕರ್ ಅವ್ರೇ ಈ ಹಾಡನ್ನ ಬರೆದಿದ್ದಾರೆ…ಜುಗಲ್ ಬಂದಿ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಡಬ್ಬಿಂಗ್ ನಲ್ಲಿ ಚಿತ್ರತಂಡ ಬ್ಯುಸಿ ಆಗಿದೆ…ಈ ಹಾಡಿನ ಮೂಲಕ ಚಿತ್ರದ ಪ್ರಚಾರ ಆರಂಭಿಸಿದ್ದು ಜನವರಿಯಲ್ಲಿ ಸಿನಿಮಾ ತೆರೆಗೆ ತರೋ ಪ್ರಯತ್ನದಲ್ಲಿದೆ ಸಿನಿಮಾತಂಡ …ಇನ್ನು ಚಿತ್ರ ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿದ್ದು ಪ್ರದ್ಯೋತನ್ ಸಂಗೀತ ನೀಡಿದ್ದಾರೆ.. ಎಸ್.ಕೆ. ರಾವ್ ಛಾಯಾಗ್ರಹಣ ಸಿನಿಮಾಗಿದೆ…ಮತ್ತೊಂದು ಸ್ಪೆಷಲ್ ಅಂದ್ರೆ ಈ ಹಾಡನ್ನ ಕೇರಳ ಮೂಲದ ಗಾಯಕಿ ಡಾ.ವೈಕಂ ವಿಜಯಲಕ್ಷ್ಮಿಹಾಡಿದ್ದಾರೆ…ಕಣ್ಣಿಲ್ಲದಿದ್ದರು ತಾಯಿಯ ಹಾಡಿಗೆ ಡಾ.ವೈಕಂ ವಿಜಯಲಕ್ಷ್ಮಿ ಅವರು ಜೀವ ತುಂಬಿರೋದು ಅದ್ಬುತ ಎನ್ನಿಸುತ್ತೆ…..