ಜೇಮ್ಸ್ ಜಾತ್ರೆ ಹೇಗಿರಲಿದೆ ಗೊತ್ತಾ ಇಲ್ಲಿದೆ ಕಂಪ್ಲೀಟ್ ಮಾಹಿತಿ
4ದಿನಗಳ ಕಾಲ ನಡೆಯಲಿದೆ ಪುನೀತ್ ಜೇಮ್ಸ್ ಜಾತ್ರೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ತೆರೆಗೆ ಬರಲು ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ… ಈಗಾಗಲೇ ಅಭಿಮಾನಿಗಳು ಸಿನಿಮಾವನ್ನ ಬರಮಾಡಿಕೊಳ್ಳಲು ಕಾತರದಿಂದ ಕಾದಿದ್ದು ಥಿಯೇಟರ್ ಗಳ ಮುಂದೆ ಈಗಾಗಲೇ ಹಬ್ಬದ ವಾತಾವರಣ ಕಳೆಗಟ್ಟುತ್ತಿದೆ …

ಪುನೀತ್ ಅಭಿನಯದ ಕೊನೆಯ ಸಿನಿಮಾ ಇದಾಗಿದ್ದು ಹಾಗಾಗಿ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇವೆ …ಸಾಮಾನ್ಯವಾಗಿ ಪ್ರತಿ ಸಿನಿಮಾಗಳು ಚೆನ್ನಾಗಿರುತ್ತೆ ಅಥವಾ ಚೆನ್ನಾಗಿರೋದಿಲ್ಲ ಅನ್ನೋ ಲೆಕ್ಕಾಚಾರದಲ್ಲಿ ಅಭಿಮಾನಿಗಳು ಸಿನಿಮಾ ನೋಡಲು ತಯಾರಾಗುತ್ತಾರೆ… ಆದರೆ ಈ ಬಾರಿ ಸಿನಿಮಾ ಕಣ್ತುಂಬಿಕೊಳ್ಳಲು ಭಾವನಾತ್ಮಕವಾಗಿ ಅಭಿಮಾನಿಗಳು ಸಿದ್ಧರಾಗಿದ್ದಾರೆ …

ಜೇಮ್ಸ್ ಸಿನಿಮಾ ಇದೇ ತಿಂಗಳ 17ರಂದು ಬಿಡುಗಡೆಯಾಗಲಿದ್ದು, ಸಿನಿಮಾವನ್ನ ಹಬ್ಬದಂತೆ ಸಂಭ್ರಮಿಸಲು ಅಭಿಮಾನಿಗಳು 4ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ …ಜೇಮ್ಸ್ ಸಿನಿಮಾ ಬಿಡುಗಡೆ ಆಗುವ ದಿನ ಮುಖ್ಯ ಚಿತ್ರಮಂದಿರದಲ್ಲಿ ಹೆಲಿಕಾಪ್ಟರ್‌ನಿಂದ 32 ಕಟೌಟ್‌ಗಳಿಗೆ ಪುಷ್ಪಾರ್ಚನೆ ,ಅನ್ನಸಂತರ್ಪಣೆ,ಸಿಹಿ ವಿತರಣೆ,ಉಚಿತ ಆರೋಗ್ಯ ತಪಾಸಣೆ, ನೇತ್ರದಾನ ಶಿಬಿರ ,ರಕ್ತದಾನ ಶಿಬಿರ, ಗಿಡಗಳ(ಸಸಿ) ವಿತರಣೆ ಮಕ್ಕಳಿಗೂ ಹಾಗೂ ವೃದ್ಧರಿಗೂ ವಸ್ತ್ರ ವಿತರಣಿ ಮಾಡಲಾಗುತ್ತೆ…
18-03-2022 ಶುಕ್ರವಾರ, ಬೆಳಗ್ಗೆ 10.00ರಿಂದ ಮುಖ್ಯ ಚಿತ್ರಮಂದಿರದಲ್ಲಿ ಅನ್ನಸಂತರ್ಪಣೆ ಹಾಗೂ ಸಿಹಿ ವಿತರಣೆ
19-03-2022 ಶನಿವಾರ, ಬೆಳಗ್ಗೆ 10.00ಕ್ಕೆ
ಅನ್ನಸಂತರ್ಪಣೆ ಹಾಗೂ ಸಿಹಿ ವಿತರಣೆ
ಇನ್ನು 20-03-2022 ಭಾನುವಾರ, ಮಧ್ಯಾಹ್ನ 1.00 ರಿಂದ ಬಿರಿಯಾನಿ ವಿತರಣೆ, ಸಿಹಿ ವಿತರಣೆ ಸಂಜೆ 4.30 ಕ್ಕೆ ರಾಜಾಜನಗರ 6ನೇ ಬ್ಲಾಕ್ ಡಾ. ರಾಜ್‌ಕುಮಾರ್ ರಸ್ತೆಯಲ್ಲಿನ ಬಿಬಿಎಂಪಿ & ಭವನದಿಂದ ಮಾಗಡಿ ರಸ್ತೆಯಲ್ಲಿರುವ ಬೀರೇಶ್ ಚಿತ್ರಮಂದಿರದ ವರೆಗೆ “ಜೇಮ್ಸ್” ಜಾತ್ರೆ ಮೆರವಣಿಗೆ ಮೆರವಣಿಗೆಯಲದಲಿ ಕಲಾತಂಡಗಳು ಭಾಗಿ ಹೀಗೆ ನಾಲ್ಕು ದಿನ ನಡೆಯಲಿದೆ ಜೇಮ್ಸ್ ಜಾತ್ರೆ .
