ಪಿಚ್ಚರ್ UPDATE

ಡಿ.30ಕ್ಕೆ ಜಮಾಲಿಗುಡ್ಡದಲ್ಲಿ ಸಿಗ್ತಾರೆ ಡಾಲಿ ಧನಂಜಯ್‌..!

ಡಿ.30ಕ್ಕೆ ಜಮಾಲಿಗುಡ್ಡದಲ್ಲಿ ಸಿಗ್ತಾರೆ ಡಾಲಿ ಧನಂಜಯ್‌..!
  • PublishedNovember 12, 2022

ಕನ್ನಡದಲ್ಲಿ ಈ ವರ್ಷದ ಮೋಸ್ಟ್‌ ಬ್ಯುಸಿಯೆಸ್ಟ್‌ ನಟ ಡಾಲಿ ಧನಂಜಯ್‌ ಅಭಿನಯದ ಈ ವರ್ಷದ ಕೊನೆಯ ಸಿನಿಮಾ, ಒನ್ಸ್‌ ಅಪಾನ್‌ ಏ ಟೈಮ್‌ ಇನ್‌ ಜಮಾಲಿಗುಡ್ಡ ಸಿನಿಮಾ ವರ್ಷದ ಕೊನೆ ವಾರ, ಡಿ.30ರಂದು ತೆರೆಗೆ ಬರ್ತಾ ಇದೆ. ಕನ್ನಡ ಇಂಡಸ್ಟ್ರಿಯ ಮೋಸ್ಟ್‌ ಲಕ್ಕಿಯೆಸ್ಟ್‌ ವೀಕ್‌ ಅಂತಲೇ ಪಾಪ್ಯುಲರ್‌ ಆಗಿರೋ ಡಿಸೆಂಬರ್‌ ಕೊನೆಯವಾರದಲ್ಲಿ ರಿಲೀಸ್‌ ಆಗ್ತಾ ಇರೋ ಜಮಾಲಿಗುಡ್ಡ, ತನ್ನ ವಿಭಿನ್ನ ಮೇಕಿಂಗ್‌, ಸಾಂಗ್‌ ಎಲ್ಲಕ್ಕೂ ಮೊದಲು ಸಿನಿಮಾದ ಟೈಟಲ್‌. ಬ್ಯಾಕ್‌ ಟು ಬ್ಯಾಕ್‌ ಆಕ್ಷನ್‌ & ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ನಟಿಸ್ತಾ ಇರೋ ಡಾಲಿ ಧನಂಜಯ್‌, ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಾ ಇದ್ದಾರೆ.

ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಬರ್ತಾ ಇರೋ ಜಮಾಲಿಗುಡ್ಡ ಸಿನಿಮಾದಲ್ಲಿ ಡಾಲಿ ಧನಂಜಯ್‌ ಅವ್ರ ಜೊತೆಗೆ ಅದಿತಿ ಪ್ರಭುದೇವಾ, ಬಾಲ ಕಲಾವಿದೆ ಪ್ರಾಣ್ಯ ರಾವ್‌, ಭಾವನಾ ರಾಮಯ್ಯ ಮುಂತಾದವರು ನಟಿಸಿದ್ದಾರೆ. ಕುಶಾಲ್‌ ಗೌಡ ನಿರ್ದೇಶನದಲ್ಲಿ ರೆಡಿಯಾಗಿರೋ ಸಿನಿಮಾಕ್ಕೆ ಮ್ಯಾಜಿಕಲ್‌ ಕಂಪೋಸರ್‌ ಅರ್ಜುನ್‌ ಜನ್ಯ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ, ಈಗಾಗ್ಲೆ ಸಿನಿಮಾದ ಸಾಗಿದೆ ಹಾಡು ಪಾಪ್ಯುಲರ್‌ ಆಗಿದೆ. ಶ್ರೀಹರಿ ನಿರ್ಮಾಣ ಮಾಡಿರೋ ಸಿನಿಮಾ ಮೂಲಕ ಡಾಲಿಯ ಮತ್ತೊಂದು ಅವತಾರ ಅನಾವರಣ ಆಗಲಿದೆ.

Written By
Kannadapichhar