ಪಿಚ್ಚರ್ SPECIAL

ಆ ಒಂದು ಘಟನೆಯಿಂದ, 2 ವರ್ಷ ನಾನ್ ವೆಜ್ ಮುಟ್ಟಿರಲಿಲ್ಲ ಜಗ್ಗೇಶ್..!

ಆ ಒಂದು ಘಟನೆಯಿಂದ, 2 ವರ್ಷ ನಾನ್ ವೆಜ್ ಮುಟ್ಟಿರಲಿಲ್ಲ ಜಗ್ಗೇಶ್..!
  • PublishedNovember 11, 2022

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು, ಆನಡುವು ಗ್ರಾಮದ, ಈಶ್ವರ್ ಗೌಡನ ಬಣ್ಣ ಎತ್ತರ ನೋಡಿ ಅವತ್ತು ಆಡಿಕೊಂಡಿದ್ದ ಜನ, ಇವತ್ತು ಅವರನ್ನ ನಮ್ಮೂರವನು , ನಮ್ಮ ಸ್ನೇಹಿತ ನಮ್ಮ ರಿಲೇಟಿವ್ ಅಂತ ಹೇಳಿಕೊಳ್ಳೋ ಮಟ್ಟಿಗೆ ಬೆಳೆದಿರೋದಕ್ಕೆ ಕಾರಣ, ಅವತ್ತು ಅವರಿಗಾದ ಅವಮಾನ. ಚಿತ್ರದ ಹೆಸರು ಹೇಳೋದು ಬೇಡ ಅನಿಸುತ್ತೆ. ಅವತ್ತು ಜಗ್ಗೇಶ್ ಅವರಿನ್ನು ಕನ್ನಡ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿದ್ದ ಕಲಾವಿದ. ಒಂದು ದಿನ ಒಂದು ಸಿನಿಮಾ ಚಿತ್ರೀಕರಣ ಬರದಿಂದ ಸಾಗುತ್ತಿರುತ್ತದೆ. ಎಂದಿನಂತೆ ಅವತ್ತು ಊಟದ ಬ್ರೇಕ್ ಮೊದಲೆ, ಮಾಂಸ ಪ್ರಿಯ ಜಗ್ಗೇಶ್ ಅವರಿಗೆ ಅಂದು ಕೆಲಸ ಮಾಡಿ ಸ್ವಲ್ಪ ಜಾಸ್ತೀನೆ ಹಸಿವಾಗಿತ್ತು. ನಿರ್ದೇಶಕರ ಪಕ್ಕದಲ್ಲಿ ಕೂತು ತಟ್ಟೆಯನ್ನ ಹಿಡಿದುಕೊಂಡು, ಯಾವಾಗ ನನ್ನ ಸರದಿ ಬರುತ್ತೋ ಅಂತ ಕಾಯುತ್ತಿದ್ದರು. ಜಗ್ಗೇಶರನ್ನ ನೋಡಿ ಪ್ರೊಡಕ್ಷನ್ ಹುಡುಗನೊಬ್ಬ.. “ಲೇ… ಯಾವನೋ ಇವನನ್ನ ಇಲ್ಲಿ ಕೂರಿಸಿದ್ದು.. ಎದ್ದೋಗಯ್ಯ” ಅಂತ ಏಕ ವಚನ ಪ್ರಯೋಗ ಅವರ ಮೇಲೆ ಆಗುತ್ತದೆ. ಇದರಿಂದ ನೊಂದ ಜಗ್ಗೇಶ್ ಅಂದು ಒಂದು ನಿರ್ಧಾರಕ್ಕೆ ಬರುತ್ತಾರೆ. ನಾನು ಮುಂದೊಂದು ದಿನ ದೊಡ್ಡ ಸಂಭಾವನೆ ಪಡೆದು, ಇವರ ಸಾಲುಗಳಲ್ಲಿ ಕೂತು ಊಟ ಮಾಡುವ ಯೋಗ್ಯತೆಯನ್ನ ಪಡೆಯುವ ತನಕ, ನಾನು ನಾನ್ ವೆಜ್ ಮುಟ್ಟುವುದಿಲ್ಲ. ಹೀಗೆ ಪ್ರತಿಜ್ಞೆ ಮಾಡಿದ ಜಗ್ಗೇಶ್ ಮತ್ತೆ ಮಾಡಿದ್ದು ಇತಿಹಾಸ. ಒಂದು ಕಾಲದಲ್ಲಿ ಜಗ್ಗೇಶ್ ಕಾಮಿಡಿ ಇದೆ ಅಂದ್ರೆ ಜನ ಥಿಯೇಟರಿಗೆ ಬರ‍್ತಾರೆ, ಅನ್ನೋ ಮಾತು ಕೂಡ ಚಾಲ್ತಿಗೆ ಬಂತು. 90ರ ದಶಕದಲ್ಲಿ 2 ಲಕ್ಷ ಸಂಭಾವನೆ ಪಡೆಯುವ ಪೋಷಕ ನಟನಾಗಿ ಬೆಳೆದ ಜಗ್ಗೇಶ್, ಇಂದು ರಾಜ್ಯಸಭಾ ಸದಸ್ಯರಾಗುವವರೆಗು ಬೆಳೆದಿದ್ದಾರೆ. ಸಾವಿರಾರು ಕಲಾವಿದರ ನೆರವಿಗೆ ನಿಂತು, ಇಂದು ಕನ್ನಡ, ಕರ್ನಾಟಕವನ್ನ ಬಿಟ್ಟು ಹೋಗದೆ ನಾನೊಬ್ಬ ರಾಜಕಮಾರ್ ಅಭಿಮಾನಿ, ಎಂದು ಎದೆ ತಟ್ಟಿಹೇಳಿಕೊಂಡು, ತನ್ನನ್ನ ತಾನು ಕನ್ನಡಕ್ಕೆ ಮುಡಿಪಾಗಿಟ್ಟುಕೊಂಡ, ಸ್ವಾಭಿಮಾನಿ ಕನ್ನಡಿಗನ ಈ ಬೆಳವಣಿಗೆಗೆ ದೊಡ್ಡ ಸಲಾಂ.

Written By
Kannadapichhar