ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆ ಸಂಭ್ರಮ.
ಇಂದು ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಮದುವೆ ಸಮಾರಂಭ ನಡೆಯಲಿದೆ.ಮದುವೆಯೂ ರಾಜಸ್ಥಾನದ ಉದಯಪುರದಲ್ಲಿ ತಮ್ಮ ಆಪ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದ್ದು, ಕೊಡವ ಮತ್ತು ತೆಲುಗು ಸಂಪ್ರದಾಯದ ಪ್ರಕಾರ ನವ ಜೋಡಿಗಳು ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಗೀತಾಗೋವಿಂದಂ’ ಕಲ್ಯಾಣಕ್ಕೆ ಸ್ಟಾರ್ಸ್ ಸಾಕ್ಷಿ :
ಬಹುಭಾಷ ನಟಿ ರಶ್ಮಿಕಾ ಮತ್ತು ವಿಜಯ್ ತಮ್ಮ ಮದುವೆಗೆ ಸಿನಿಮಾ ರಂಗದ ಕೆಲವೇ ಕೆಲ ಆಪ್ತರನ್ನು ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ.ಸದ್ಯಕ್ಕೆ ಬಂದಿರುವ ಮಾಹಿತಿಯ ಪ್ರಕಾರ ತರುಣ್ ಭಾಸ್ಕರ್, ಸಂದೀಪ ರೆಡ್ಡಿ ವಂಗ,ಆಶಿಕಾ ರಂಗನಾಥ್, ಈಶಾ ರೇಬ್ಭಾ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇನ್ನು ಅನೇಕ ಸ್ಟಾರ್ ನಟ, ನಟಿಯರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೈದರಾಬಾದ್ ನಲ್ಲಿ ಆರತಕ್ಷತೆ:
ವಿಜಯ್ ದೇವರಕೊಂಡ ತಮ್ಮ ಅಭಿಮಾನಿಗಳಿಗಾಗಿ ಹೈದರಾಬಾದ್ ನಲ್ಲಿ ಮಾರ್ಚ್ 4 ರಂದು ಆರತಕ್ಷತೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಜತೆಗೆ ರಶ್ಮಿಕಾ ಮೂಲತಃ ಕೊಡಗಿನವರಾಗಿದ್ದು, ವಿರಾಜಪೇಟೆಯಲ್ಲಿ ತಮ್ಮ ಬಂಧುಗಳಿಗಾಗಿ ಮತ್ತು ಆಪ್ತರಿಗಾಗಿ ಆರತಕ್ಷತೆ ಆಯೋಜಿಸಲಾಗಿದೆ ಎನ್ನಲಾಗಿದೆ.