ದುಬಾರಿ ಧ್ರುವ ಸರ್ಜಾ ಮೇಲೆ ನಾಯಕಿಯ ಸವಾರಿ..!

ಭರಾಟೆ,ಕಿಸ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಕನ್ನಡಿಗರ ಹಾಟ್ ಫೆವರಿಟ್ ಆಗಿರುವ ನಟಿ ಶ್ರೀಲೀಲಾ ಈಗ ಮತ್ತೊಂದು ಜಾಕ್ ಪಾಟ್ ಹೊಡೆದಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮುಂದಿನ ಸಿನಿಮಾ ದುಬಾರಿಗೆ ನಾಯಕಿಯಾಗಿದ್ದಾರೆ ಶ್ರೀಲೀಲಾ.

ಉದಯ ಮೆಹ್ತಾ ನಿರ್ಮಾಣದಲ್ಲಿ ಹಾಗೂ ನಂದಕಿಶೋರ್ ಡೈರೆಕ್ಷನ್ ನಲ್ಲಿ ರೆಡಿಯಾಗ್ತಿರೋ ದುಬಾರಿ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಆಗಿರೋ ದುಬಾರಿಯಲ್ಲಿ ಶ್ರೀಲೀಲಾ ಗ್ಲಾಮರ್ ಗೊಂಬೆಯಾಗಿ ಪಡ್ಡೆ ಹುಡುಗರ ನಿದ್ದೆ ಕೆಡಿಸಲಿದ್ದಾರೆ.

ಕಿಸ್ ಸಿನಿಮಾದ ನಂತರ ಶ್ರೀಮುರಳಿ ಅವರ ಜತೆಗೆ ಭರಾಟೆ ಚಿತ್ರದಲ್ಲಿ ನಟಿಸಿದ್ದ ಶ್ರೀಲೀಲಾ ಈಗ ಮತ್ತೊಬ್ಬ ಸೂಪರ್ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಮಿಂಚ್ತಾ ಇರೋದು, ಶ್ರೀಲೀಲಾ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸಿದೆ.

