News

ಸಲಗ ಮೆಚ್ಚಿದ ಟಗರು..!

ಸಲಗ ಮೆಚ್ಚಿದ ಟಗರು..!
  • PublishedOctober 22, 2021

ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವಣ್ಣ ಇಂದು ಓರಾಯನ್ ಮಾಲ್ ನ ಪಿವಿಆರ್ ನಲ್ಲಿ ಸಲಗ ಸಿನಿಮಾ ನೋಡಿದ್ದಾರೆ. ಇಡೀ ಸಲಗ ಚಿತ್ರತಂಡದ ಕಲಾವಿದರು ಇಂದು ಶಿವಣ್ಣ ಅವರೊಂದಿಗೆ ಚಿತ್ರ ವೀಕ್ಷಣೆ ಮಾಡಿದ್ದಾರೆ. ಕೊರೊನಾ ನಂತರ  ಚಂದನವನದಲ್ಲಿ ಬಿಡುಗಡೆಗೊಂಡು ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಸಲಗ ಚಿತ್ರ ಸಕತ್ ಸೌಂಡ್ ಮಾಡ್ತಿದೆ.

ಶಿವರಾಜಕುಮಾರ್ ನಟಿಸಿರುವ ಹಲವಾರು ಚಿತ್ರಗಳಲ್ಲಿ ದುನಿಯಾ ವಿಜಯ್ ವಿಲನ್ ಪಾತ್ರದಲ್ಲಿ ಮತ್ತು ಸೈಡ್ ರೋಲ್ ನಲ್ಲಿ ಮಾಡಿದ್ದಾರೆ, ದುನಿಯಾ ನಂತರ ದುನಿಯಾ ವಿಜಯ್ ಆಗಿ ಬದಲಾಗಿದ್ದು ಇತಿಹಾಸ. ಈಗ ಅವರು ನಿರ್ದೇಶನಕ್ಕೂ ಕೈ ಹಾಕಿ ಸೈ ಎನ್ನಿಸಿಕೊಂಡಿದ್ದಾರೆ. ವಿಜಯ್ ನಿರ್ದೇಶನದ ಸಲಗ ಚಿತ್ರವನ್ನು ವೀಕ್ಷಿಸಿದ ಶಿವರಾಜ್ ಕುಮಾರ್ ಇಡೀ ಸಿನಿಮಾದ ಮೇಕಿಂಗ್, ಆಕ್ಟಿಂಗ್, ಮ್ಯೂಸಿಕ್,ಡಿಓಪಿ ಎಲ್ಲವನ್ನು ಮೆಚ್ಚಿಕೊಂಡಿದ್ದಾರೆ.

ಚಿತ್ರ ವೀಕ್ಷಿಸಿದ ನಂತರ ಮಾತನಾಡಿದ ಶಿವರಾಜ್ ಕುಮಾರ್ ದುನಿಯಾ ವಿಜಯ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸಲಗ ಚಿತ್ರ ಉತ್ತಮವಾಗಿದೆ, ಎಲ್ಲಾ ಪಾತ್ರಗಳನ್ನು ತುಂಬಾ ಅದ್ಭುತವಾಗಿ ತೋರಿಸಿದ್ದಾರೆ, ಸ್ಕ್ರೀನ್ ಪ್ಲೇ ದಿ ಬೆಸ್ಟ್, ಮಾಸ್ತಿ ಅವರ ಸಂಭಾಷಣೆ ಟಗರು ಸಿನಿಮಾ ನಂತರ ಮತ್ತೊಮ್ಮೆ ಅವರ ಶಕ್ತಿ ಏನೆಂದು ಸಲಗ ಚಿತ್ರದಲ್ಲಿ ತೋರಿಸಿದ್ದಾರೆ, ಡಾಲಿ ಧನಂಜಯ್ ಅವರು ತುಂಬಾ ಮುದ್ದಾಗಿ ತೆರೆಯ ಮೇಲೆ ಕಾಣ್ತಾರೆ, ಚಿಕ್ಕ ಚಿಕ್ಕ ಪಾತ್ರಗಳು ಮನಸ್ಸಿನಲ್ಲಿ ಉಳಿಯುವಂತೆ ತೋರಿಸಿದ್ದಾರೆ ಎಂದರು. ಇಡೀ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ರು.

ಒಟ್ಟಾರೆ ಒಬ್ಬ ಸ್ಟಾರ್ ನಟ ಮತ್ತೊಂದು ಚಿತ್ರದ ಯಶಸ್ಸನ್ನು ಬಯಸಿ ಸಿನಿಮಾ ವೀಕ್ಷಿಸಿ ಚಿತ್ರ ತಂಡದ ಶ್ರಮವನ್ನು ಹೊಗಳಿ ಹಾರೈಸುವುದು ಕನ್ನಡ ಚಿತ್ರರಂಗಕ್ಕೆ ಅವಶ್ಯಕವಾಗಿ ಬೇಕಿದೆ, ಆ ನಿಟ್ಟಿನಲ್ಲಿ ಇಂದು ಶಿವಣ್ಣ ಅವರು ಬಂದು ಚಿತ್ರ ವೀಕ್ಷಿಸಿ ಅಭಿನಂದಿಸಿರುವುದು ಒಳ್ಳೆಯ ಬೆಳವಣಿಗೆ ಎನ್ನುತ್ತಿದೆ ಗಾಂಧಿ ನಗರ.

****

Written By
Kannadapichhar

Leave a Reply

Your email address will not be published. Required fields are marked *