ಗೋಲ್ಡನ್ ಸ್ಟಾರ್ ಗೆ 20 ರ ಸಂಭ್ರಮ!
ಕನ್ನಡ ಸಿನಿಮಾ ರಂಗಕ್ಕೆ ಹಾಸ್ಯ ಮತ್ತು ಭಾವನಾತ್ಮಕ ಸಿನಿಮಾಗಳನ್ನು ನೀಡಿರುವ ನಟರ ಪಟ್ಟಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಹ ಒಬ್ಬರು.ಪ್ರೇಮ ಕಥೆಗಳಿಗೆ ಒಂದು ಹೊಸ ಆಯಾಮ ನೀಡಿದ ವ್ಯಕ್ತಿ.ತನ್ನ ಅದ್ಭುತ ನಟನೆಯಿಂದ ಸಿನಿ ಪ್ರೇಕ್ಷಕರ ಕಣ್ಣಲಿ ಮುಂಗಾರು ಮಳೆ ಹರಿಸಿ,ಡೈಲಾಗ್ ಮೂಲಕ ಮುಗುಳು ನಗೆ ತರಿಸುವ ಸಾಮರ್ಥ್ಯ ಉಳ್ಳ ಪರಿಪೂರ್ಣ ನಾಯಕ ನಟ. ಇಂದಿಗೆ ನಾಯಕ ನಟನಾಗಿ ಪಾದರ್ಪಣೆ ಮಾಡಿ 20 ವರ್ಷ ಗಳ ಸಂಭ್ರಮದಲ್ಲಿದ್ದಾರೆ.
ಗಣೇಶ್ ಅವರು ಬೆಳ್ಳಿ ತೆರೆಗೆ ಪರಿಚಯವಾಗಿದ್ದು ‘ಟಪೋರಿ’ ಆದರೆ ಒಂದು ಪರಿ ಪೂರ್ಣ ನಾಯಕನಾಗಿ ನಟಿಸಿದ್ದು ಚೆಲ್ಲಾಟ ಸಿನಿಮಾದ ಮೂಲಕ. ಚೆಲ್ಲಾಟ 2006 ರಲ್ಲಿ ತೆರೆಕಂಡಿತ್ತು. ಈಗಲೂ ಗಣೇಶ್ ಅವರ ಅದ್ಭುತ ಸಿನಿಮಾ ಪಟ್ಟಿಯಲ್ಲಿ ಇದೆ. ಇದಾದ ಬಳಿಕ ಕನ್ನಡ ಸಿನಿ ರಂಗದ ಬ್ಲಾಕ್ ಬಸ್ಟರ್ ಹಿಟ್ ‘ಮುಂಗಾರು ಮಳೆ ‘ ಇಂದ ಹುಡುಗರ ಕಣ್ಣಲ್ಲಿ ನೀರನ್ನೇ ತರಿಸಿದ ನಟ.ಅದಾದ ಬಳಿಕ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಕೊಟ್ಟ ಇವರ ಸಿನಿಮಾಗಳ ಹೊಸ ಹಾಡು ಜೊತೆ ಹಳೇ ಹಾಡು ಇವಾಗ್ಲೂ ಟ್ರೆಂಡ್ ಅಲ್ಲಿ ಇರುತ್ತೆ.ಇವತ್ತಿಗೆ ಇವರ ಈ ನಾಯಕನ ಪಯಣಕ್ಕೆ 20 ವರ್ಷ.