‘ಡೆವಿಲ್’ ನಲ್ಲಿ ದೊಡ್ಮನೆ ಕಾಮಿಡಿ ಕಿಂಗ್ ಗಿಲ್ಲಿ
ಡಿಸೆಂಬರ್ 11 ರಂದು ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಬಿಡುಗಡೆ ಕಾಣಲಿರುವ ‘ಡೆವಿಲ್’ ಚಿತ್ರದಲ್ಲಿ ಅದ್ಬುತ ತಾರ ಬಳಗವಿದ್ದು ಸದ್ಯಕ್ಕೆ ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ಬಿಗ್ ಬಾಸ್ ನ ಗಿಲ್ಲಿನಟ ಕೂಡ ಒಬ್ಬರು.
ಇತ್ತೀಚಿಗಷ್ಟೇ ಡೆವಿಲ್ ಚಿತ್ರ ತಂಡ ಗಿಲ್ಲಿ ನಟ ಡೆವಿಲ್ ಫಿಲಂ ನಲ್ಲಿ ಇರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದ್ದರು. ಅದನ್ನು ನೋಡಿದ ಗಿಲ್ಲಿ ಅಭಿಮಾನಿಗಳು ಗಿಲ್ಲಿ ಪಾತ್ರದ ಬಗ್ಗೆ ಸಾಕಷ್ಟು ನೀರಿಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ತಮ್ಮ ಪ್ರಾಪರ್ಟಿ ಕಾಮಿಡಿಯಿಂದನೇ ಜನ ಮನ್ನಣೆ ಪಡೆದು ಈಗ ದೊಡ್ಮನೆಯಲ್ಲಿ ಪೀಪಲ್ ಫೇವರಿಟ್ ಆಗಿರುವ ಗಿಲ್ಲಿ ನಟ ಸಿನಿಮಾದಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಜನರನ್ನು ರಂಜಿಸಲಿದ್ದಾರೆ ಎಂದು ಮಿಲನ ಪ್ರಕಾಶ್ ಹೇಳಿದ್ದಾರೆ.