new updates News ಪಿಚ್ಚರ್ stories ಪಿಚ್ಚರ್ UPDATE

ಬನಿಯನ್ ಹಾಕಿದ್ರು ರಾಜ ಗಿಲ್ಲಿನೇ, ಸೂಚನೆ ಕೊಟ್ಟ ಕಿಚ್ಚ ಸುದೀಪ್ ಏನದು..?

ಬನಿಯನ್ ಹಾಕಿದ್ರು ರಾಜ ಗಿಲ್ಲಿನೇ, ಸೂಚನೆ ಕೊಟ್ಟ ಕಿಚ್ಚ ಸುದೀಪ್ ಏನದು..?
  • PublishedJanuary 4, 2026

ಈ ಬಾರಿ ಬಿಗ್ ಬಾಸ್ 12 ಗಿಲ್ಲಿ ನಟ ಅವರೇ ಟ್ರೋಫಿ ಗೆಲ್ಲುತ್ತಾರೆ ಅನ್ನೋ ಅಭಿಪ್ರಾಯ ಬಹುತೇಕರಿಗೆ ಇದೆ. ಆ ಅಭಿಪ್ರಾಯಕ್ಕೆ ತಕ್ಕಂತೆಯೇ ಗಿಲ್ಲಿ ಆಟ ಆಡುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳ ಫೇವರೇಟ್ ಗಿಲ್ಲಿ.. ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಗೂ ಗಿಲ್ಲಿ ಆಟ ಇಷ್ಟ ಆಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್​ ಬಾಸ್ ಕನ್ನಡ ಸೀಸನ್ 12 ಫಿನಾಲೆ ಬರಲಿದೆ. ಗಿಲ್ಲಿಯೇ ಗೆಲ್ಲಬಹುದು ಎಂಬ ಸೂಚನೆಯನ್ನು ಕಿಚ್ಚ ಸುದೀಪ್ ಅವರು ಪರೋಕ್ಷವಾಗಿ ನೀಡಿದ್ದಾರೆ.

ಹೌದು.. ನಿನ್ನೆ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಗಿಲ್ಲಿ ನಟನಿಗೆ ಪ್ರಶ್ನೆ ಯನ್ನ ಕೇಳ್ತಾರೆ ಅದಕ್ಕೆ ಗಿಲ್ಲಿ ಬಿಗ್ ಬಾಸ್ ವಿನ್ನರ್ ಪ್ರಥಮ್ ಮತ್ತು ಹನುಮಂತನ ಸೀಸನ್ ಮೋಡಿದ್ದೀನ್ ಅಂತ ಉತ್ತರ ಕೊಡ್ತಾರೆ.. ಈ ರೀತಿ ಗಿಲ್ಲಿ ನಟ ಅವರು ಕೂಡ ಆಡುತ್ತಿದ್ದಾರೆ. ಅದನ್ನು ಕಿಚ್ಚ ಸುದೀಪ್ ಅವರು ಗಮನಿಸಿ ಹೇಳಿದ್ದಾರೆ. ಆ ಮೂಲಕ ಅವರು ದೊಡ್ಡ ಸೂಚನೆ ಕೊಟ್ಟಿದ್ದಾರೆ. ಈ ಹಿಂದಿನ ಎಲ್ಲ ಸೀಸನ್ ಸಂಚಿಕೆಗಳನ್ನು ನೋಡಿಕೊಂಡು ಬಂದು ಗಿಲ್ಲಿ ನಟ ಅವರು ಚೆನ್ನಾಗಿ ಆಟ ಆಡುತ್ತಿದ್ದಾರೆ ಅಂತ ಹೇಳಿದ್ರು..

ಈ ಹಿಂದೆ ಪ್ರಥಮ್ ಮತ್ತು ಹನುಮಂತ ಅವರು ಬಿಗ್ ಬಾಸ್ ಟ್ರೋಫಿ ಗೆದ್ದಿದ್ದರು. ಈಗ ಗಿಲ್ಲಿ ನಟ ಆಡುತ್ತಿರುವ ಆಟದಲ್ಲಿ ಕೂಡ ಪ್ರಥಮ್ ಮತ್ತು ಹನುಮಂತ ಅವರ ರೀತಿಯೆ ಕಾಣುತ್ತಿದೆ. ಅದನ್ನು ಕಿಚ್ಚ ಸುದೀಪ್ ಅವರು ನೋಡಿದ್ದಾರೆ. ಗಿಲ್ಲಿ ನಟ ಬಿಗ್ ಬಾಸ್ ಅರ್ಥ ಮಾಡಿಕೊಂಡಷ್ಟು ಚೆನ್ನಾಗಿ ಬೇರೆ ಯಾರೂ ಅರ್ಥ ಮಾಡಿಕೊಂಡಿಲ್ಲ ಎಂದು ಸುದೀಪ್ ಬೇರೆ ಸ್ಪರ್ಧಿಗಳಿಗೆ ಡೈರೆಕ್ಟಾಗಿ ಹೇಳಿದ್ದಾರೆ.
ಗಿಲ್ಲಿ ಪಾತ್ರದಲ್ಲಿ ಒಂದು ಸ್ವಲ್ಪ ಹನುಮಂತ ಒಂದು ಸ್ವಲ್ಪ ಪ್ರಥಮ್ ಇದ್ದಾರೆ. ಎಷ್ಟು ಸಲ ನಾನು ಈ ಸುಳಿವನ್ನು ಪರೋಕ್ಷವಾಗಿ ಕೊಟ್ಟಿದ್ದೆ. ಗಿಲ್ಲಿ ರೀತಿ ತಯಾರಿ ಮಾಡಿಕೊಂಡು ಬರುವುದು ಖಂಡಿತಾ ತಪ್ಪಲ್ಲ. ಎಲ್ಲ ಸೀಸನ್ ನೋಡಿಕೊಂಡು ಬಂದಿದ್ದಾರೆ. ಗಿಲ್ಲಿ ಹಾಕಿರುವುದು ಬನಿಯನ್ ಇರಬಹುದು. ಆದರೆ ಬಾಳುತ್ತಿರುವ ಬಾಳು ರಾಜಂದು ಎಂದು ಸುದೀಪ್ ಅವರು ಹೇಳಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *