ಮಳವಳ್ಳಿ ಹುಡುಗನ ಕೈ ಸೇರಿದ ಬಿಗ್ ಬಾಸ್ ಕಪ್
ಬಿಗ್ ಬಾಸ್ 12 ಸುಮಾರು 24 ಸ್ಪರ್ಧಿಗಳನ್ನು ಒಳಗೊಂಡಿದ್ದಂತಹ ಈ ಸೀಸನ್ ಭರ್ಜರಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಈ ವರ್ಷದ ವಿನ್ನರ್ ಯಾರು ಎಂದು ಬಹಳ ಚರ್ಚೆಗಳು ನಡೆದಿತ್ತು ಇದೀಗ ಇದಕ್ಕೆ ಬ್ರೇಕ್ ಬಿದ್ದಿದೆ.
ಮಳವಳ್ಳಿಯ ಮಣ್ಣಿನ ಮಗನಾಗಿ ಪರಿಚಯವಾದ ಜಿಲ್ಲೆ ಇದೀಗ ಕರ್ನಾಟಕದ ನೆಚ್ಚಿನ ಪ್ರೀತಿಯ ಮಗನಾಗಿ ಚಂದ್ರ ಮನಸ್ಸನ್ನು ಕದ್ದು ಬಿಗ್ ಬಾಸ್ ಟೈಟಲ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಸುಮಾರು 37 ಕೋಟಿಗು ಅಧಿಕ ವೋಟನ್ನು ಗಳಿಸುವ ಮೂಲಕ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತಿ ಹೆಚ್ಚು ವೋಟ್ ಗಳಿಸಿರುವ ಸ್ಪರ್ಧಿಯಾಗಿಯೂ ಹೊರಹಮ್ಮಿದ್ದಾರೆ.
ಬಿಗ್ ಮನೆಗೆ ಎಂಟ್ರಿ ಕೊಟ್ಟಿರುವ ದಿನದಿಂದಲೂ ಇಲ್ಲಿಯವರೆಗೂ ಬ್ಯಾಕ್ ಟು ಬ್ಯಾಕ್ ಕಂಟೆಂಟ್ ಕೊಟ್ಟು ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿ ಬಿಗ್ ಬಾಸ್ ನಲ್ಲಿ ಜೀವಿಸಿ ಕಪ್ ಗೆದ್ದಿದ್ದಾರೆ. ಕ್ರೇಜ್ ಅಂದ್ರೆ ಇದು ಅಂತ ತೋರಿಸಿ ಕೊಟ್ಟಿರೋ ಗಿಲ್ಲಿ ಅವರು ಬಿಗ್ ಮನೆಗೆ ಹೋಗುವ ಮೊದಲು ಎರಡು ಲಕ್ಷ ದಷ್ಟು ಫಾಲೋವರ್ಸ್ ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಂದಿದ್ದರು . ಆದರೆ ಅವರು ಬರೋಕಿಂತ ಮುಂಚೆ ಅವರ ಖಾತೆಯಲ್ಲಿ 1. 6 ಮಿಲಿಯನ್ ಅಷ್ಟು ಫಾಲೋವರ್ಸ್ ನ ಪಡೆದಿದ್ದಾರೆ. ಇದನ್ನು ನೋಡಿದ್ದ ಅವರ ಅಭಿಮಾನಿಗಳು ಈ ಸಲ ಬಿಗ್ ಬಾಸ್ ಕಪ್ಪು ಪಕ್ಕ ಗಿಲ್ಲಿದೆ ಅಂತ ಹೇಳ್ತಿದ್ರು ಅದು ಈಗ ನಿಜವಾಗಿದೆ.
ಪ್ರಾಪರ್ಟಿ ಕಾಮಿಡಿಯಿಂದ ಪರಿಚಿತವಾಗಿ ಈಗ ಪಾಪ್ಯುಲರ್ ಪರ್ಸನ್ ಆಗಿ ಮಿಂಚುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ದೇಶದಿಂದ ವಿದೇಶದವರೆಗೂ ನಾಡಿನಿಂದ ಗಡಿಯ ವರೆಗೂ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.