new updates News ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಅತ್ತೆ ಮಗಳು vs ಗಿಲ್ಲಿ: ದೊಡ್ಮನೇಲಿ ಮತ್ತೆ ʼಯೋಗ್ಯತೆʼ ವಾರ್!

ಅತ್ತೆ ಮಗಳು vs ಗಿಲ್ಲಿ: ದೊಡ್ಮನೇಲಿ ಮತ್ತೆ ʼಯೋಗ್ಯತೆʼ ವಾರ್!
  • PublishedJanuary 2, 2026

ಬಿಗ್ ಬಾಸ್ ಕನ್ನಡದ 12 ರ ಆವೃತಿ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ.ಕಳೆದ ವಾರ ಸ್ಪರ್ದಿಗಳು ಫ್ಯಾಮಿಲಿ ಎಂಟ್ರಿ ವೀಕ್ ಇದ್ದುದ್ದರಿಂದ ತಣ್ಣಗಾಗಿದ್ದರು. ಮನೆ ಪೂರ್ತಿ ಸಂಭ್ರಮ ತುಂಬಿತ್ತು. ಆದರೆ ಇದು ಬಿಗ್‌ ಬಾಸ್‌ ಯಾವಾಗ ಏನಾಗುತ್ತೋ ಗೊತ್ತಿಲ್ಲ. ಹಾಗಾಗಿ ಮತ್ತೆ ಈ ವಾರ ಗದ್ದಲಗಳು ಸ್ಟಾರ್ಟ್ ಆಗಿದೆ.

ಆದರೆ ಈ ಬಾರಿ ಬಿಗ್ ಬಾಸ್ ಅಲ್ಲಿ ʼಯೋಗ್ಯತೆʼ ವಿಚಾರವಾಗಿ ಅತೀ ಹೆಚ್ಚು ಕಿತ್ತಾಟಗಳಾಗಿದೆ. ಇದೀಗ ಮತ್ತೆ ಇದೆ ಯೋಗ್ಯತೆ ಬಗ್ಗೆ ಗಿಲ್ಲಿ ಹಾಗೂ ಅತ್ತೆ ಮಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಪ್ರೋಮೊದಲ್ಲಿ ಏನಿದೆ?
ಇವತ್ತು ಬಿಗ್ ಬಾಸ್ ಬಿಟ್ಟಿರುವ ಪ್ರೋಮೊ ಪ್ರಕಾರ ಗಿಲ್ಲಿ “ಅಶ್ವಿನಿಯವ್ರು ಹೀರೋ ಆಗಬೇಕು” ಅನ್ನೋದಕ್ಕೆ ಅಶ್ವಿನಿ “ನಾನ್ ಹೀರೋ ಆಗಕ್ಕೆ ಹೊರಟಿಲ್ಲ, ನಿನ್ ಜೋಕರ್ ಆಗಬೇಡ” ಎಂದು ಟಾಂಗ್‌ ಕೊಟ್ಟಿದ್ದಾರೆ. ಇದೇ ರೀತಿ ಮಾತಿಗೆ ಮಾತು ಬೆಳೆದು ಗಿಲ್ಲಿ ಅಶ್ವಿನಿಯವರಿಗೆ “ಕ್ಯಾಪ್ಟನ್ ಆಗೋ ಯೋಗ್ಯತೆ ಇಲ್ಲ” ಅನ್ನೋವಾಗ ಯೋಗ್ಯತೆ ಬಗ್ಗೆ ಮತ್ತೆ ಮಾತಿನ ಜಿದ್ದಾಜಿದ್ದಿ ಮನೆಯಲ್ಲಿ ನಡೆದಿದೆ. ಇನ್ನು ನಿಜವಾಗಿಯೂ ಏನಾಗಿದೆ ಅನ್ನೋದನ್ನ ಇವತ್ತಿನ ಎಪಿಸೋಡ್ ಅಲ್ಲಿ ನೋಡಬೇಕಿದೆ.

ಇದೇನು ಮೊದಲ ಬಾರಿಗೆ ಇಬ್ಬರ ನಡುವೆ ಜಗಳವಾಗುತ್ತಿಲ್ಲ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಗಿಲ್ಲಿ ಹಾಗೂ ಅಶ್ವಿನಿ ಅವರ ನಡುವೆ ಅನೇಕ ಕಾರಣಗಳಿಂದ ಈ ಹೊಡೆದಾಟ ಬಡೆದಾಟ ನಡೆಯುತ್ತಲ್ಲೇ ಇದೆ. ಆದರೆ ಸ್ವಲ್ಪ ದಿನ ಈ ಫೈಟ್ ಗೆ ಬ್ರೇಕ್ ಬಿದಿತ್ತು. ಇದೀಗ ಮತ್ತೆ ಪ್ರಾರಂಭವಾಗಿದೆ.

Written By
Kannada Picchar

Leave a Reply

Your email address will not be published. Required fields are marked *