new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಈ ಸಲ ಬಿಗ್ ಬಾಸ್ ಕಪ್ ಗಿಲ್ಲಿದೆ?

ಈ ಸಲ ಬಿಗ್ ಬಾಸ್ ಕಪ್ ಗಿಲ್ಲಿದೆ?
  • PublishedJanuary 2, 2026

ಬಿಗ್‌ ಬಾಸ್‌ ಕನ್ನಡ 12ರ ಆವೃತಿಯು ಭರ್ಜರಿಯಾಗಿ ಒಪನಿಂಗ್‌ ಪಡೆದಿತ್ತು.ಇದೀಗ ಈ ಸೀಸನ್‌ ನ ಫಿನಾಲೆಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ.ಈ ಸೀಸನ್‌ ಶುರುವಾಗಿನಿಂದಲೂ ಯಾರು ಕಪ್ ಗೆಲ್ತಾರೆ ನ್ನೋದರ ಬಗ್ಗೆ ಚರ್ಚೆ ಬಿರುಸಾಗಿ ನಡೀತಾ ಇದೆ.

ಇದೆ ಕುತೂಹಲಕ್ಕಾಗಿ ನಮ್ಮ ಕನ್ನಡ ಪಿಚ್ಚರ್ ಚಾನಲ್ ಯೂಟ್ಯೂಬ್ ನಲ್ಲಿ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರು? ಎಂದು ವೋಟ್ ಪೋಲ್ ಹಾಕಿತ್ತು. ನಮಗೆ ಬಂದಿರುವ ರಿಸಲ್ಟ್ ಪ್ರಕಾರ 100% ರಲ್ಲಿ 80% ಜನರು ಗಿಲ್ಲಿ ನಟ ಅವರು ವಿನ್ ಆಗುತ್ತಾರೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಸ್ಟಾರ್ಟ್ ಆಗಿನಿಂದ ಇಲ್ಲಿಯವರೆಗೂ ಗಿಲ್ಲಿನಟ ಅವರ ಹೆಸರು ಬಿಗ್‌ ಬಾಸ್ ವಿನ್ನರ್‌ ಎಂದು ಕೇಳಿ ಬರುತ್ತಿದೆ. ಗಿಲ್ಲಿ ನಟನ ಹಾಸ್ಯ ಎಲ್ಲರ ಮನ ಗೆದಿದ್ದು ಈ ವರ್ಷ ಅವರೇ ಬಿಗ್ ಬಾಸ್ ಟೈಟಲ್ ಹೋಲ್ಡರ್ ಆಗಬೇಕು ಎಂದು ಹಲವರ ಆಶಯ.

ಅವರ ಹಾಸ್ಯ ಪ್ರಜ್ಞೆ ಹಾಗೂ ಮಂಡ್ಯ ಶೈಲಿಯ ಭಾಷೆ ಜನರನ್ನು ನಗಿಸುತ್ತಾ, ರಂಜಿಸುತ್ತಾ ಬಂದಿದೆ.ಒಬ್ಬ ಪಕ್ಕ ಹಳ್ಳಿ ಹೈದನ ವೈಬ್ ಕೊಡುವ ಗಿಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿರುವ ಸ್ಪರ್ಧಿ. ಜೊತೆಗೆ ಮನೆಯಲ್ಲಿ ಅವರ ಸಿಂಪಲ್ ಡ್ರೆಸ್ಸಿಂಗ್ ಆಗಿರಬಹುದು, ಯಾವ ವಿಚಾರಕ್ಕೂ ತಲೆ ಕೆಡಿಸಿಕೊಳ್ಳದ ಸ್ವಭಾವ ಆಗಿರಬಹುದು ಎಲ್ಲವು ಅವರ ಅಭಿಮಾನಿ ಬಳಗವನ್ನು ಹೆಚ್ಚಿಸಿದೆ. ಹಾಗಾಗಿ ಈ ಬಾರಿ ವಿನ್ ಆಗಬಹುದು ಎನ್ನುವ ಆಲೋಚನೆ ಕೆಲವರಿಗೆ ಮೂಡಿದೆ.

Written By
Kannada Picchar

Leave a Reply

Your email address will not be published. Required fields are marked *