ಗಿಲ್ಲಿ ಜೊತೆ ಸಿನಿಮಾ ಮಾಡ್ತೀನಿ ಶಿವಣ್ಣ ಬಿಗ್ ಅನೌನ್ಸ್!
By Pallavi N Raj
ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಿದೆ. ಗಿಲ್ಲಿಗೆ ಫ್ಯಾನ್ಸ್ ಕೂಡ ಸಖತ್ತಾಗೇ ಇದ್ದಾರೆ.. ಶಿವಣ್ಣನ ಮೆಚ್ಚುಗೆ ಹಾಗೂ ಸಿನಿಮಾ ಆಫರ್ ಪಡೆದಿದ್ದಾರೆ ಗಿಲ್ಲಿನಟ.. ಡೆವಿಲ್ ಚಿತ್ರದಲ್ಲೂ ಗಿಲ್ಲಿ ಗಮನ ಸೆಳೆದಿದ್ದಾರೆ. ರಿಯಾಲಿಟಿ ಶೋಗಳಿಂದ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಇವರಿಗೆ ಈಗ ಹೆಚ್ಚಿನ ಸಿನಿಮಾ ಆಫರ್‌ಗಳು ಬರುತ್ತಿವೆ. ಗಿಲ್ಲಿಯ ವಿಶಿಷ್ಟ ಕಾಮಿಡಿ ಟೈಮಿಂಗ್ ಜನರನ್ನು ಸೆಳೆದಿದೆ, ಅವರ ವೃತ್ತಿಜೀವನಕ್ಕೆ ಹೊಸ ತಿರುವು ಕೂಡ ನೀಡಿದೆ…
ಹೌದು.. ಗಿಲ್ಲಿಗೆ ಶಿವಣ್ಣ ಅಂದರೆ ತುಂಬಾನೇ ಅಭಿಮಾನ. ಗಿಲ್ಲಿ ಜೊತೆ ಸಿನಿಮಾ ಮಾಡೋದಾಗಿ ಶಿವರಾಜ್ಕುಮಾರ್ ಅವರು ಈ ಹಿಂದೆ ಹೇಳಿದ್ದರು. ಆ ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ..
ಅಂಹಾಗೆ.. ಗಿಲ್ಲಿ ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದವರು. ಅವರು ಈ ಮೊದಲು ಡ್ಯಾನ್ಸ್ ಕರ್ನಾಟಕ ಡ್ಯಾನ್ಸರ್ನಲ್ಲಿ ನಾನ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದರು. ಈ ಶೋಗೆ ಶಿವರಾಜ್ಕುಮಾರ್ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ಶಿವರಾಜ್ಕುಮಾರ್ ಅವರಿಗೆ ಗಿಲ್ಲಿಯ ಕಾಮಿಡಿ ಇಷ್ಟ ಆಗಿತ್ತು. ಈ ವೇಳೆ ಶಿವಣ್ಣ ಅವರು ಹೇಳಿದ ಒಂದು ಮಾತು ಸಿಕ್ಕಾಪಟ್ಟೆ ಗಮನ ಸೆಳೆದಿತ್ತು..
ಇನ್ನೂ.. ಗಿಲ್ಲಿ ನಟ ಈಗಾಗಲೇ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ. ಈಗ ಬಿಗ್ ಬಾಸ್ ಅಲ್ಲಿ ಅವರ ಟೈಮಿಂಗ್ ಡೈಲಾಗ್ ಡೆಲಿವರಿ ಎಲ್ಲವೂ ಇಷ್ಟ ಆಗಿದೆ. ಹೀಗಾಗಿ, ಅವರಿಗೆ ಬರೋ ಆಫರ್ ಮತ್ತಷ್ಟು ಹೆಚ್ಚಬಹುದು. ಮುಖ್ಯವಾಗಿ, ಡೆವಿಲ್ ಸಿನಿಮಾದಲ್ಲಿ ನಟಿಸಿದ್ದು, ಕಾಮಿಡಿ ಮೂಲಕ ಗಮನ ಸೆಳೆದಿದ್ದಾರೆ. ಇದು ಕೂಡ ಅವರ ವೃತ್ತಿ ಜೀವನಕ್ಕೆ ಸಹಾಯ ಆಗಬಹುದು..