KANNADA PICHHAR EXCLUSIVE: ಲಾಕ್ ಡೌನ್ ಇದ್ರೂ ನಿಂತಿಲ್ಲ ʼಗಟ್ಟಿಮೇಳʼ ಶೂಟಿಂಗ್..!

ರಾಜ್ಯಾದ್ಯಂತ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ಕಟ್ಟುನಿಟ್ಟಿನ ಲಾಕ್‌ಡೌನ್ ಮಾಡಿ, ಕೊರೊನಾದಿಂದ ಮುಕ್ತರಾಗಲು ಸರ್ಕಾರ ಪಣ ತೊಟ್ಟು, ಜನರನ್ನ ಹೊರಬರದಂತೆ ಮನವಿ ಮಾಡ್ತಿದ್ದಾರೆ. ಮೆಡಿಕಲ್ ಎಮರ್ಜೆನ್ಸಿ ಹೊರತು ಪಡಿಸಿ, ದಿನ ಬಳಕೆ ವಸ್ತುಗಳ ಖರೀದಿಗೂ ಸಮಯ ನಿಗದಿ ಮಾಡಿದ್ದಾರೆ. ಎಲ್ಲಾ ಕಾರ್ಖಾನೆ, ಉದ್ಯಮಗಳನ್ನೂ ಬಂದ್ ಮಾಡಲಾಗಿದೆ. ಈ ಉದ್ಯಮಗಳಲ್ಲಿ ಚಿತ್ರೋದ್ಯಮ ಕೂಡ ಒಂದು.
ಈಗಾಗ್ಲೆ ಸಿನಿಮಾ ಚಿತ್ರೀಕರಣ ಬಂದ್ ಮಾಡಲಾಗಿದೆ, ರಿಯಾಲಿಟಿ ಶೋಗಳು ಬಂದ್ ಮಾಡಬೇಕಾದ ಕಾರಣ ಜನಪ್ರಿಯಾ ರಿಯಾಲಿಟಿ ಶೋ ಬಿಗ್ ಬಾಸ್ ಕೂಡ ನಿನ್ನೆ ಸ್ಥಗಿತ ಮಾಡಲಾಗಿದೆ. ಉಳಿದಂತೆ ಎಲ್ಲಾ ಚಾನೆಲ್‌ಗಳ ರಿಯಾಲಿಟಿ ಶೋ ಚಿತ್ರೀಕರಣ ಮಾಡದಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಶೂಟಿಂಗ್ ನಿಲ್ಲಿಸಲಾಗಿದೆ. ಈ ನಡುವೆ ಟಿವಿ ಸೀರಿಯಲ್ ಅಸೋಸಿಯೇಷನ್ ಕೂಡ ಸೀರಿಯಲ್ ಶೂಟಿಂಗ್ ನಿಲ್ಲಿಸುವಂತೆ ಸೂಚಿಸಿತ್ತು..

ಆದ್ರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾಪ್ಯುಲರ್ ಸೀರಿಯಲ್ ಗಟ್ಟಿಮೇಳದ ಚಿತ್ರೀಕರಣವನ್ನ ಕದ್ದು ಮುಚ್ಚಿ ಮಾಡಲಾಗ್ತಾ ಇದೆ. ಕುಣಿಗಲ್ ಬಳಿಯ ರಾಯಲ್ ಕಿಂಬರ್ಲಿ ರೆಸಾರ್ಟ್ನಲ್ಲಿ ಗಟ್ಟಿಮೇಳ ಧಾರವಾಹಿಯ ಶೂಟಿಂಗ್ ನಡೀತಾ ಇದೆ. ಸುಮಾರು 20 ಮಂದಿ ಸೀರಿಯಲ್ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಲಾಕ್‌ಡೌನ್ ಕಾರಣದಿಂದ ಈಗಾಗ್ಲೆ ನಿಗದಿಯಾಗಿರುವ ಮದುವೆ ಕಾರ್ಯಕ್ರಮವನ್ನೇ ಮನೆಯಲ್ಲಿ ಮಾಡಲು ಸೂಚಿಸಿರುವಾಗ.. ಈ ಸೀರಿಯಲ್ ತಂಡ ಮಾಡುತ್ತಿರೋ ಕೆಲಸ ಬೇಸರ ತರಿಸುತ್ತದೆ.
ಮೇ 10 ರಿಂದ 24 ರ ತನಕ ಯಾವುದೇ ಧಾರವಾಹಿ ಶೂಟ್ ಮಾಡಬಾರದು ಅಂತಾ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸೂಚನೆ ನೀಡಿದ್ರೂ ಶೂಟಿಂಗ್ ನಡೆಸಲಾಗ್ತಿದೆ. ಈ ಮೂಲಕ ಶೂಟಿಂಗ್‌ನಲ್ಲಿ ಭಾಗಿಯಾಗಿರೋ 20ಕ್ಕೂ ಹೆಚ್ಚು ಜನ ಹಾಗೂ ಅವ್ರ ಕುಟುಂಬದ ಪ್ರಾಣದ ಜೊತೆ ಆಟವಾಡ್ತಾ ಇದೆ ಸೀರಿಯಲ್ ಟೀಮ್. ಈ ಕೂಡಲೇ ಶೂಟಿಂಗ್ ನಿಲ್ಲಿಸುವಂತೆ ಜೀ ಕನ್ನಡ ವಾಹಿನಿ ಕ್ರಮ ಕೈಗೊಳ್ಳಲ್ಲಿ ಅನ್ನೋದೇ ಸಿನಿಮಾ, ಸೀರಿಯಲ್ ಕಲಾವಿರದ ಪರವಾಗಿ ಕನ್ನಡ ಪಿಚ್ಚರ್ ಬೇಡಿಕೆ.