News

‘ನಿನ್ನಲೆ ಅಡಗಿರೊ ನನ್ನಾ ಬಡಿದೆಬ್ಬಿಸಿ ಒಮ್ಮೆ ನೋಡು’ ಎನ್ನುತ ಕಂಬ್ಯಾಕ್ ಆದ ರಾಕೇಶ್ ಅಡಿಗ..!

‘ನಿನ್ನಲೆ ಅಡಗಿರೊ ನನ್ನಾ ಬಡಿದೆಬ್ಬಿಸಿ ಒಮ್ಮೆ ನೋಡು’ ಎನ್ನುತ ಕಂಬ್ಯಾಕ್ ಆದ ರಾಕೇಶ್ ಅಡಿಗ..!
  • PublishedSeptember 22, 2021

ರಾಕೇಶ್ ಅಡಿಗ ಮತ್ತೆ ರ್‍ಯಾಪ್ ಲೋಕಕ್ಕೆ ಕಂ ಬ್ಯಾಕ್ ಆಗಿದ್ದಾರೆ. ಫ್ರೀ ಸ್ಪಿರಿಟ್ ಎಂಬ ಹೆಸರಿನ ರ್‍ಯಾಪ್ ಹಾಡಿನ ಮೂಲಕ ಭ್ರಮೆಯಲ್ಲಿರುವ ಬುದ್ದಿವಂತರಿಗೆ ಚಾಟಿ ಬೀಸಿದ್ದಾರೆ.  ಸಮಾಜದಲ್ಲಿರುವ ಅಂಕು ಡೊಂಕುಗಳು, ಮಾನಸಿಕ ದಿವಾಳಿತನ ಮತ್ತು ಅರ್ಧ ಸತ್ಯ ತಿಳಿದು ನನಗೆ ಎಲ್ಲವೂ ಗೊತ್ತು ಎನ್ನುವ ಜನರ ಅಹಂಗಳಿಗೆ ರ್‍ಯಾಪ್ ಹಾಡು ಫ್ರೀ ಸ್ಪಿರಿಟ್ ಮೂಲಕ ಚೆನ್ನಾಗಿಯೇ ಚುಚ್ಚಿದ್ದಾರೆ ರಾಕೇಶ ಅಡಿಗ ಮತ್ತು ತಂಡ.

ಸದ್ಯ ವ್ಯವಸ್ಥೆಯನ್ನು ಕಾಡುತ್ತಿರುವ ಭ್ರಷ್ಟಾಚಾರ, ಮಾಧ್ಯಮಗಳ ಸುದ್ದಿಯ ಹಪಾಹಪಿ, ಧರ್ಮದ ಅಫೀಮು, ಕೋಮು ವೈಷಮ್ಯ, ಧರ್ಮ ಮತ್ತು ಜಾತಿ ರಾಜಕಾರಣ,ನಮಗೆ ಅರಿವೇ ಇಲ್ಲದಂತೆ ನಶೆಯನ್ನು ದೇಹ ಮತ್ತು ತಲೆಗೆ ಹೇಗೆ ತುಂಬುತ್ತಿದ್ದಾರೆ ಎಂದು ರ್‍ಯಾಪ್  ಸಾಂಗ್ ಮೂಲಕ ಚೆನ್ನಾಗಿ ಮತ್ತು ಅರ್ಥಗರ್ಭಿತವಾಗಿ ಹೇಳಿದ್ದಾರೆ.

ಹಾಡಿನಲ್ಲಿ ರಾಕೇಶ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳೂವ ಮೂಲಕ ವಿಭಿನವಾಗಿ ಹಾಡನ್ನು ತೋರಿಸಿರುವ ರೀತಿ ತಂಡದ ಕೌಶಲ್ಯದ ಕೆಲಸಕ್ಕೆ ಕನ್ನಡಿ ಹಿಡಿದಂತಿದೆ. ರಾಕೇಶ್ ಅಡಿಗರ ಈ ‘ಫ್ರೀ ಸ್ಪಿರಿಟ್’ ಹಾಡನ್ನು ನಿರ್ದೇಶನ ಮಾಡಿರುವುದು ಆನಂದ್ ಕುವರ, ನೃತ್ಯ ಸಂಯೋಜನೆ ಲಕ್ಷ್ಮಿ ದೇವರಾಜು, ಮೇಕಪ್‌ ಪ್ರಿಯಾಂಕಾ ದವಳಗಿ, ಸಂಗೀತ ಸಮೀರ್ ಕುಲಕರ್ಣಿ, ಕ್ಯಾಮೆರಾ ಕೆಲಸ ವಿಶ್ವಜಿತ್ ರಾವ್ ಅವರದ್ದು. ಒಟ್ಟಾರೆ ಇಡೀ ತಂಡದ ಆಲೋಚನೆ ವಿಭಿನವಾಗಿದ್ದು ರ್‍ಯಾಪ್ ಹಾಡಿನ ಮೂಲಕವೂ ಇಂತಹ ಪ್ರಯತ್ನವನ್ನು ಮಾಡಬಹುದು ಎಂದು ತೋರಿಸಿಕೊಟ್ಟಿದೆ ಇಡೀ ತಂಡ. ಹಾಡಿಗೆ ಉತ್ತಮ ರೆಸ್ಪಾನ್ಸ್ ಕೂಡ ಬರುತ್ತಿದ್ದು ಹಾಡನ್ನು ನೋಡಿರುವ ಹಲವರು ಹಾಡನ್ನು ಮೆಚ್ಚಿ ಕಮೆಂಟ್ ಮಾಡಿದ್ದಾರೆ ಮತ್ತು ರಾಕೇಶ್ ಅವರ ರೀ ಎಂಟ್ರಿಗೆ ವೆಲ್ ಕಮ್ ಎಂದಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *