ಸೋಲು ನೋಡಿದವ್ರು
ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಕೆಲವು ಸ್ಟಾರ್ ಸಿನಿಮಾಗಳು ಹಿಟ್ ಆದರೂ,ವರ್ಷದ ಮೊದಲಾರ್ಧದಲ್ಲೇ ಕೆಲವು ಹೈ ಬಜೆಟ್ ಸಿನಿಮಾಗಳು ‘ಫ್ಲಾಪ್’ ಪಟ್ಟಿಗೆ ಸೇರಿವೆ.ಭಾರೀ ನಿರೀಕ್ಷೆ, ದೊಡ್ಡ ಪ್ರಚಾರ ಮತ್ತು ಕೋಟಿ ಕೋಟಿ ಬಜೆಟ್ ಇದ್ದರೂ,ಈ ಸಿನಿಮಾಗಳು ನಿರ್ಮಾಪಕರಿಗೆ ಕೈ ಸುಟ್ಟ ಅನುಭವ ನೀಡಿವೆ.ನೋಡೋಣ 2025ರಲ್ಲಿ ಫ್ಲಾಪ್ ಆದ ಪ್ರಮುಖ ಕನ್ನಡ ಸಿನಿಮಾಗಳನ್ನು,
ಅಧಿಪತ್ರ

ಮೊದಲನೇಯದಾಗಿ ಅದಿಪತ್ರ ಸಿನಿಮಾ ಕೋಸ್ಟಲ್ ಥ್ರಿಲ್ಲರ್ ಸಿನಿಮಾಗೆ ಸೇರಿದ ಅದಿಪತ್ರ, ಹೀರೋ ರೂಪೇಶ್ ಶೆಟ್ಟಿ ಹಾಗೂ Bigg Boss ಖ್ಯಾತಿಯ ಜಾನ್ವಿ ನಟಿಸಿದ್ದ ಈ ಸಿನಿಮಾ,ನಿರೀಕ್ಷಿಸಿದ ಮಟ್ಟಿಗೆ ಹಣ ಗಳಿಸಲಿಲ್ಲ.
ಕುಲದಲ್ಲಿ ಕೀಳ್ಯಾವುದು
ಈ ಸಿನಿಮಾ ಯೋಗರಾಜ್ ಭಟ್ ಮತ್ತು ಇಸ್ಲಾಂ ಉದ್ದಿನ್ ಅವರ ಕತೆ ಮಾಡಿನೂರು ಮನು, ಮೌನ ಗುಡ್ಡೆ ಮನೆ ಸೇರಿದಂತೆ ವಿಭಿನ್ನ ಲೊಕೇಷನ್‌ಗಳಲ್ಲಿ ಶೂಟ್ ಮಾಡಲಾಗಿತ್ತು.ಆದರೆ ಮನು ಅವರ ಕುರಿತ ಕೆಲವು ವಯಕ್ತಿಕ ಹಾಗೂ ಇತರ ಕಾರಣಗಳಿಂದ ಸಿನಿಮಾ ಫ್ಲಾಪ್ ಪಟ್ಟಿಗೆ ಸೇರಿತು.
ವಿಷ್ಣು ಪ್ರಿಯಾ

ಶ್ರೇಯಸ್ ಮಂಜು ನಾಯಕನಾಗಿ, ಪ್ರಿಯಾ ವಾರಿಯರ್ ನಾಯಕಿಯಾಗಿ ನಟಿಸಿದ ಲವ್ ಸಿನಿಮಾ. ಸಾಂಗ್‌ಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ,ಸಹ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕಮಾಲ್ ಮಾಡಲಿಲ್ಲ.
ಕೋಣ
ತನಿಷಾ ಕುಪಂಡ ಅವರು ನಿರ್ಮಿಸಿ ನಟಿಸಿದ ಈ ಸಿನಿಮಾದಲ್ಲಿ ಜಗ್ಗೇಶ್ ಅವರ ಸೋದರ ಕೋಮಲ್ ಹಾಗೂ ವಿನಯ್ ಗೌಡ ನಟಿಸಿದ್ದರು. ಥ್ರಿಲ್ಲಿಂಗ್ ಅಂಶಗಳಿದ್ದರೂ,ಥಿಯೇಟರ್‌ಗೆ ಜನರನ್ನು ಸೆಳೆಯುವಲ್ಲಿ ವಿಫಲವಾಯಿತು.
ಸೂತ್ರಧಾರಿ

ಚಂದನ್ ಶೆಟ್ಟಿ ಹೀರೋ ಆಗಿ ಡೆಬ್ಯೂ ಮಾಡಿದ ಸಿನಿಮಾ.ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. “ಡ್ಯಾಶ್” ಸಾಂಗ್ ದೊಡ್ಡ ಮಟ್ಟಿಗೆ ಸೌಂಡ್ ಮಾಡಿದ್ದರೂ,ಸಿನಿಮಾ ಥಿಯೇಟರ್ ತುಂಬಿಸಲಿಲ್ಲ.
ನಾನು ಮತ್ತು ಗುಂಡ 2

ನಾನು ಮತ್ತು ಗುಂಡ ಸಿನಿಮಾ ಹಿಟ್ ಆಗಿತ್ತು ಆದರೆ ಇದರ ಸೀಕ್ವೆಲ್‌ನಲ್ಲಿ ರಾಕೇಶ್ ಅಡಿಗ, ರಚನಾ ಇಂದರ್,ಮುಖ್ಯ ಭೂಮಿಕೆಯಲ್ಲಿ ಸಾಧು ಕೋಕಿಲ ಅವರ ಕಾಮಿಡಿ ಹಾಗೂ ಡಾಗ್ ಪಾತ್ರ ಇದ್ದರೂ,ಸಿನಿಮಾ ಅಷ್ಟೊಂದು ಹಿಟ್ ಆಗಲಿಲ್ಲ.
ರಿಪ್ಪನ್ ಸ್ವಾಮಿ

ವಿಜಯರಾಘವೇಂದ್ರ ವೈಲೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.ಒಳ್ಳೆ ಪಾತ್ರದಲ್ಲಿ ಬಂದರೂ ಸಹ,ಇದು ಅವರ ದೊಡ್ಡ ಕಮ್‌ಬ್ಯಾಕ್ ಆಗಲಿಲ್ಲ.ಸಿನಿಮಾ ಫ್ಲಾಪ್ ಲಿಸ್ಟ್ ಸೇರಿತು.
ಫೈರ್ ಫ್ಲೈ
ಹೊಸಬರ ಸಿನಿಮಾ.ಹೀರೋ ವಂಶಿ, ವಿಭಿನ್ನ ಪಾತ್ರ ಶಿವಣ್ಣ ಕೇಮಿಯೋ ಇದ್ದರೂ,ಸರಿಯಾದ ಪ್ರೊಮೋಷನ್ಇ ಲ್ಲದ ಕಾರಣ ಸಿನಿಮಾ ಫ್ಲಾಪ್ ಪಟ್ಟಿಗೆ ಸೇರಿತು.
ವಾಮನ

ಹೀರೋ ಧನ್ವೀರ್, ನಾಯಕಿ ರೇಷ್ಮಾ ನಾಣಯ್ಯ.ನಟಿಸಿದಂತ ಬಾರಿ ಹೈಪ್. ಕ್ರಿಯೇಟ್ ಮಾಡಿದ್ದ ಸಿನಿಮಾ ಟ್ರೈಲರ್‌ಗೆ ಭರ್ಜರಿ ಕ್ರೇಜ್, ಸಾಂಗ್‌ಗಳು ಹಿಟ್ ಆಗಿದ್ದರೂ, ಥಿಯೇಟರ್‌ಗೆ ಜನರನ್ನು ಕರೆತರುವಲ್ಲಿ ಸಿನಿಮಾ ಎಡವಿತ್ತು
ಕಪಟ ನಾಟಕ ಸೂತ್ರಧಾರಿ

ಹೊಸಬರು ಮಾಡಿದ ಸಿನಿಮಾ. ಮೇಕಿಂಗ್ ಚೆನ್ನಾಗಿದ್ದರೂ,ಪ್ರೇಕ್ಷಕರ ಸಂಖ್ಯೆಯಲ್ಲಿ ಹಿನ್ನಡೆ ಅನುಭವಿಸಿ ಫ್ಲಾಪ್ ಲಿಸ್ಟ್ ಸೇರಿತು.
ಕೊತ್ತಲವಾಡಿ

ಯಶ್ ಅವರ ತಾಯಿ ಪುಷ್ಪಾ ಅವರು ನಿರ್ಮಾಣ ಮಾಡಿದ ಸಿನಿಮಾ. ಪೃಥ್ವಿ ಅಂಬರ್ ಹಾಗೂ ಕಾವ್ಯಾ ನಟಿಸಿದ್ದರು. ಸರಿಯಾದ ಪ್ರಚಾರ ಮಾಡಿದರೂ,ಸಿನಿಮಾ ಹೇಳಿಕೊಳ್ಳುವಷ್ಟು ಓಡಲಿಲ್ಲ.
2025ರಲ್ಲಿ ಕಂಟೆಂಟ್, ಮೌತ್ ಪಬ್ಲಿಸಿಟಿ ಮತ್ತು ರೇಟಿಂಗ್‌ಗಳು ಎಷ್ಟು ಮುಖ್ಯ ಎಂಬುದನ್ನು
ಈ ಸಿನಿಮಾಗಳು ಮತ್ತೊಮ್ಮೆ ಸಾಬೀತುಪಡಿಸಿವೆ.ಹೈಪ್ ಮತ್ತು ಬಜೆಟ್ ಮಾತ್ರ ಸಿನಿಮಾವನ್ನು ಹಿಟ್ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ.