‘ಹಯಗ್ರೀವ’ ಸಿನಿಮಾದ ಮೊದಲನೆಯ ಹಾಡು ಬಿಡುಗಡೆ
ಧನ್ವೀರ್ ಅವರು ಮತ್ತು ಸಂಜನಾ ಆನಂದ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವಂತಹ ಹಯಗ್ರೀವ ಸಿನಿಮಾದ ಮೊದಲ ಹಾಡು ಬಿಡುಗಡೆ ಕಂಡಿದೆ. ರಘುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ‘ಮೊದಲನೇ ಮಾತು’ ಎನ್ನುವ ಹಾಡನ್ನು ಯೋಗರಾಜ್ ಭಟ್ ಅವರು ಬರೆದಿದ್ದಾರೆ.ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಇನ್ನು ಈ ಹಾಡನ್ನು ಸಂಚಿತ್ ಹೆಗ್ಡೆ ಹಾಗೂ ಲಹರಿ ಮಹೇಶ್ ಅವರು ಹಾಡಿದ್ದು, ಭೂಷಣ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.