ಗಟ್ಟಿಮೇಳ ಧಾರಾವಾಹಿಯ ಏಳು ಕಲಾವಿದರ ವಿರುದ್ಧ FIR
ಕಿರುತೆರೆಯಲ್ಲಿ ಅತಿ ಹೆಚ್ಚು ಟಿ ಆರ್ ಪಿ ಗಳಿಸುವ ಮೂಲಕ ಸುದ್ದಿಯಾಗಿದ್ದ ಗಟ್ಟಿಮೇಳ ಧಾರಾವಾಹಿ ತಂಡದ ಮೇಲೆ ಎಫ್ ಐಆರ್ ದಾಖಲಾಗಿದೆ…ಹೌದು ಹೋಟೆಲ್ ನಲ್ಲಿ ಕುಡಿದು ಗಲಾಟೆ ಮಾಡಿದ ವಿಚಾರವಾಗಿ ಗಟ್ಟಿಮೇಳದ ಧಾರಾವಾಹಿ ತಂಡದ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ…
ಕೆಂಗೇರಿಯಲ್ಲಿರುವ ಜಿಂಜರ್ ಹೋಟೆಲ್ ನಲ್ಲಿ ಮಧ್ಯರಾತ್ರಿ 1.30ಆದರೂ ಕೂಡ ಧಾರಾವಾಹಿ ತಂಡದವರು ಮೋಜು ಮಸ್ತಿ ಮಾಡುತ್ತಿದ್ದ ವಿಚಾರವಾಗಿ ಪೊಲೀಸರಿಗೂ ಹಾಗೂ ಧಾರಾವಾಹಿ ತಂಡ ಮಧ್ಯೆ ವಾದ ವಿವಾದಗಳಾಗಿವೆ ..
ಹೋಟೆಲ್ ನಲ್ಲಿ ಗಲಾಟೆ ಮಾಡುವುದರ ಜತೆಗೆ ಪೊಲೀಸರ ಮೇಲೂ ವಾಗ್ವಾದ ಮಾಡಿದರೆನ್ನುವ ಕಾರಣದಿಂದಾಗಿ ಧಾರಾವಾಹಿಯ ನಟರಾದ ರಕ್ಷಿತ್, ರಂಜನ್, ರವಿಚಂದ್ರನ್, ಅಭಿಷೇಕ್, ಶರಣ್ಯ, ರಾಕೇಶ್ ಅನುಷಾ ಹೀಗೆ ಒಟ್ಟು 7ಮಂದಿಯ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ…

ಗಟ್ಟಿಮೇಳ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ಟಿ ಆರ್ ಪಿ ಹಾಗೂ ಧಾರಾವಾಹಿಯ ಕಥೆ ವಿಚಾರವಾಗಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ… ಧಾರಾವಾಹಿಯ ನಾಯಕ ರಕ್ಷಿತ್ ಈ ಹಿಂದೆ ಪುಟ್ಟಗೌರಿ ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು.. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯ ವಿಚಾರ ಬಂದಾಗಲೂ ಈ ಧಾರಾವಾಹಿಯ ಸಾಕಷ್ಟು ಕಲಾವಿದರು ವಿಚಾರಣೆಗೆ ಒಳಪಟ್ಟಿದ್ದರು….