new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಅಭಿಮಾನಿಗಳ ಊಹೆಯಲ್ಲಿ ʼ45ʼ ಚಿತ್ರ

ಅಭಿಮಾನಿಗಳ ಊಹೆಯಲ್ಲಿ ʼ45ʼ ಚಿತ್ರ
  • PublishedDecember 19, 2025

ಕನ್ನಡದ ಹೆಸರಾಂತ ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ಚಿತ್ರ ʼ45ʼ.ಮಾಸ್‌ ಗೆ ಕನ್ನಡದಲ್ಲಿ ಮತ್ತೊಂದು ಹೆಸರು ಶಿವಣ್ಣ,ಕ್ರಿಯೇಟಿವಿಟಿಗೆ ಹೆಸರಾದ ಉಪ್ಪಿ ದಾದ ಹಾಗು ಕನ್ನಡದ ಪ್ರತಿಭಾನ್ವಿತ ನಟ ರಾಜ್‌ ಬಿ.ಶೆಟ್ಟಿ ನಟನೆಯ ʼ45ʼ ಚಿತ್ರ ಡಿಸೆಂಬರ್‌ 25 ಕ್ಕೆ ಬೆಳ್ಳಿ ತೆರೆಗಪ್ಪಳಿಸಲು ಸಜ್ಜಾಗಿದೆ.

ಈಗಾಗಲೇ ಟೀಸರ್ ನಿಂದ ಚಿತ್ರ ಲೋಕದಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ʼ45ʼ ಸಿನಿಮಾದ ಕಥೆ ಬಗ್ಗೆ ಕುತೂಹಲ ಹೆಚ್ಚಾಗಿರುವ ಹೊತ್ತಲ್ಲೇ ಅಭಿಮಾನಿಗಳು ಕಥೆ ಏನಾಗಿರಬಹುದು ಎಂದು ತಮ್ಮ ಊಹೆಯನ್ನು ಸೋಶಿಯಲ್ ಮೀಡಿಯಾ ಕಾಮೆಂಟ್ಸ್ ನಲಿ ಹೇಳಿ ಕೊಂಡಿದ್ದಾರೆ.

ಅಭಿಮಾನಿಗಳ ಊಹೆ ಮಾಡಿರುವ ಪ್ರಕಾರ ಈ ಸಿನಿಮಾದಲ್ಲಿ ಉಪೇಂದ್ರ ಅವರು ಯಮನ ಪಾತ್ರದಲಿದ್ದು, ಅವರಿಗೆ ರಾಜ್ ಬಿ. ಶೆಟ್ಟಿ ಯವರು ಬೇಕಾಗಿರುತ್ತದೆ ಅದರ ಸಲುವಾಗಿ ರಾಜ್ ಅವರನ್ನು ಕರೆದುಕೊಂಡು ಹೋಗಲು ಉಪ್ಪಿ ಭೂಲೋಕಕ್ಕೆ ಬರ್ತಾರೆ. ಆಗ ರಾಜ್ ಬಿ. ಶೆಟ್ಟಿ ಗೆ ಸಹಾಯ ಮಾಡಲು ಸ್ವತಃ ಶಿವಣ್ಣ ಬರುತ್ತಾರೆ. ಅವರು ಬಂದಾದ ಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ʼ45ʼ ಚಿತ್ರ ಎಂದು ಬರೆದುಕೊಂಡಿದ್ದಾರೆ.

ಇದು ಬರೀ ಫ್ಯಾನ್ಸ್‌ ಥಿಯರಿ ಅಷ್ಟೆ. ಇನ್ನು ಸಿನಿಮಾ ರಿಲೀಸ್‌ ಆಗದ ಕಾರಣ ಚಿತ್ರಕಥೆ ಎನೆಂದು ತಿಳಿದಿಲ್ಲ.ಹಾಗಾಗಿ ಚಿತ್ರದಲ್ಲಿ ಮೂರು ಕಲಾವಿದರ ಪಾತ್ರ ,ಕಥೆ ಗಳ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಿದೆ.

Written By
Kannada Picchar

Leave a Reply

Your email address will not be published. Required fields are marked *