new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ದರ್ಶನ್ ನೆನೆದು ರಾಜವರ್ಧನ್ ಭಾವುಕ ಪೋಸ್ಟ್

ದರ್ಶನ್ ನೆನೆದು ರಾಜವರ್ಧನ್ ಭಾವುಕ ಪೋಸ್ಟ್
  • PublishedDecember 10, 2025

ನಾಳೆ ದರ್ಶನವರ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ತೆರೆ ಮೇಲೆ ಬರಲಿದ್ದು ಇದೀಗಾಗಲೇ ರಾಜ್ಯದಲ್ಲಿ ದರ್ಶನ್ ಅವರ ಫ್ಯಾನ್ ಕಟೌಟ್, ಬ್ಯಾನರ್ ಹಾಗೆ ಅನೇಕ ರೀತಿಯಲ್ಲಿ ಬಾಸ್ ಸಿನಿಮಾವನ್ನು ಬರಮಾಡಿಕೊಳ್ಳುತ್ತಿದ್ದಾರೆ. ಇದೀಗ ದರ್ಶನ್ ಅವರ ಸಹಾಯ ನೆನೆದು ನಿರ್ಮಾಪಕ ರಾಜವರ್ಧನ್ ಭಾವುಕ ಪೋಸ್ಟ್ಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೌದು, ಇಂದು ನಿರ್ಮಾಪಕ ರಾಜವರ್ಧನ್ನವರು ತಮ್ಮ ಫೇಸ್ಬುಕ್ ಖಾತೆಯಲ್ಲಿ “ಡಿಸೆಂಬರ್ 10 2018 ಸರಿಯಾಗಿ ಏಳು ವರ್ಷಗಳ ಹಿಂದೆ ಒಂದೇ ಒಂದು ಕರೆಗೆ ಓಗೊಟ್ಟು ಬಂದಿರಿ, ಅಂದು ನನ್ನ ಬಿಚ್ಚುಗತ್ತಿ ಸಿನಿಮಾ ಮುಹೂರ್ತ ನಿಮ್ಮ ಆಶೀರ್ವಾದದಿಂದಲೇ ಶುರುವಾಯಿತುನನ್ನ ಸಿನಿಮಾ ಯಾನ. ಈಗ ಅದೇ ದಿನಗಳಲ್ಲಿ ನಿಮ್ಮ ಡೆವಿಲ್ ಬರುತ್ತಿದೆ. ನಾವೆಲ್ಲರೂ ಇದ್ದೇವೆ ನಿಮ್ಮ ಈ ಸಿನಿಮಾ ಸಾಹಸದಲ್ಲಿ ಸದಾ ನಿಮ್ಮ ಜೊತೆ “ಎಂದು ಹೇಳಿ “ಮಿಸ್ ಯು “ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ವೈರಲ್ಲಾಗುತ್ತಿದ್ದಂತೆ , ದರ್ಶನ್ ಅವರ ಅಭಿಮಾನಿಗಳು ದರ್ಶನ್ ಅವರ ಕನ್ನಡ ಕಲಾವಿದರನ್ನು ಬೆಳೆಸುವ ಅವರ ಬೆನ್ನೆಲುಬಾಗಿ ನಿಂತುಕೊಳ್ಳುವ ಗುಣವನ್ನು ಹೊಗಳಿದ್ದಾರೆ.ಈಗಾಗಲೇ ಆಫ್ಲೈನ್ ಹಾಗೂ ಆನ್ಲೈನ್ ನಾಳೆ ಬಿಡುಗಡೆ ಆಗುತ್ತಿರುವ ದರ್ಶನ್ ಅವರ ಸಿನಿಮಾ ವನ್ನು ನೋಡಲು ಟಿಕೆಟ್ ಗಳು ಬುಕ್ ಆಗಿವೆ. ಈ ಸಿನಿಮಾ ಈ ವರ್ಷದ ಬಹನೇರಿ ಮತ್ತು ಸಿನಿಮಾಗಳಲ್ಲಿ ಬಂದು. ಸಿನಿಮಾಗೆ ಯಾವ ರೀತಿ ರೆಸ್ಪಾನ್ಸ್ ಸಿಗುತ್ತದೆ ಎಂದು ನಾಳೆ ಕಾದು ನೋಡಬೇಕಾಗಿದೆ.

Written By
Kannada Picchar

Leave a Reply

Your email address will not be published. Required fields are marked *