News

ರಕ್ಷಿತಾ ಬ್ರದರ್‌ ಆದ್ರೂ, ಈ ‘ಏಕಲವ್ಯ’ನ ಶ್ರದ್ಧೆ ಮೆಚ್ಚಲೇಬೇಕು!

ರಕ್ಷಿತಾ ಬ್ರದರ್‌ ಆದ್ರೂ, ಈ ‘ಏಕಲವ್ಯ’ನ ಶ್ರದ್ಧೆ ಮೆಚ್ಚಲೇಬೇಕು!
  • PublishedJanuary 14, 2021

ಕನ್ನಡದ ಹಿಟ್‌ ನಟಿ ಕ್ರೇಜಿ ಕ್ವೀನ್‌ ರಕ್ಷಿತಾ ಸೋದರ ರಾಣಾ, ಪ್ರೇಮ್‌ ನಿರ್ದೇಶನದ ಏಕ್‌ ಲವ್‌ ಯಾ ಸಿನಿಮಾ ಮೂಲಕ, ಮೊದಲ ಬಾರಿಗೆ ಹೀರೋ ಆಗಿ ಬಣ್ಣ ಹಚ್ತಾ ಇದ್ದಾರೆ. ಆದ್ರೆ ಈ ಹಿಂದೆ ರಿಲೀಸ್‌ ಆದ ಸಿನಿಮಾದ ಟೀಸರ್‌ ಗಳು, ಮೇಕಿಂಗ್‌ ನೋಡಿದ ಯಾರಿಗೆ ಆದ್ರೂ ರಾಣಾಗೆ ಇದು ಮೊದಲ ಸಿನಿಮಾ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಫೈಟ್ಸ್‌, ಸ್ಟಂಟ್ಸ್‌, ರೊಮ್ಯಾನ್ಸ್‌ ಆಕ್ಟಿಂಗ್‌ ನಲ್ಲಿ ಸ್ಕೋರ್‌ ಮಾಡಿದ್ದಾರೆ.

ಈಗ ಫೆ.14ಕ್ಕೆ ರಿಲೀಸ್‌ ಆಗ್ತಾ ಇರೋ ಹಾಡಿನಲ್ಲಿ ಸಿಕ್ಸ್‌ ಪ್ಯಾಕ್‌ ನಲ್ಲಿ ರಾಣಾ ಕಾಣಿಸಿಕೊಳ್ಳಲಿದ್ದಾರೆ. ಸಿಕ್ಸ್‌ ಪ್ಯಾಕ್‌ ಹ್ಯಾಂಡಸಮ್‌ ರಾಣಾ ಹಾಡಿನಲ್ಲಿ ಹೇಗ್‌ ಕಾಣ್ತಾರೆ ಅನ್ನೋದಕ್ಕೆ ಸಾಂಗ್‌ನ ಇನ್ವಿಟೇಷನ್‌ ನಂತೆ ರಿಲೀಸ್‌ ಆಗಿರೋ ಪೋಸ್ಟರ್‌ ಗಳೇ ಸಾಕ್ಷಿ.ಬರೀ ಪೋಸ್ಟರ್‌, ಹಾಡುಗಳು ಮಾತ್ರವಲ್ಲ, ಸಿನಿಮಾದಲ್ಲಿ ಇನ್ನಷ್ಟು ಸರ್‌ಪ್ರೈಸ್‌ಗಳನ್ನ ನೀಡಲಿದ್ದಾರೆ ರಾಣಾ.

ಏಕ್‌ ಲವ್‌ ಯಾ ಸಿನಿಮಾದ ಟೀಸರ್‌ ಹಾಗೂ ಥೀಮ್‌ ಮ್ಯೂಸಿಕ್‌ ಈಗಾಗ್ಲೆ ಹವಾ ಕ್ರಿಯೇಟ್‌ ಮಾಡಿತ್ತು. ಈಗ ಸಿನಿಮಾದ ಹಾಡು ವ್ಯಾಲೆಂಟೈನ್ಸ್‌ ಡೇಗೆ ರಿಲೀಸ್‌ ಆಗುವ ಸುದ್ದಿ ಹಿರಬಿದ್ದಿದೆ. ರಚಿತಾರಾಮ್‌ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿರೋ ಸಿನಿಮಾಕ್ಕೆ, ರೀಷ್ಮಾ ನಾಣಯ್ಯ ಮತ್ತೊಬ್ಬ ನಾಯಕಿ. ಅರ್ಜುನ್‌ ಜನ್ಯಾ ಹಾಗೂ ಪ್ರೇಮ್‌ ಕಾಂಬಿನೇಷನ್‌ನ ಇನ್ನೊಂದು ಮ್ಯೂಸಿಕಲ್‌ ಹಿಟ್‌ ಸಿನಿಮಾ ಏಕ್‌ ಲವ್‌ ಯಾ ಆಗೋದು ಪಕ್ಕ.

Written By
Kannadapichhar

Leave a Reply

Your email address will not be published. Required fields are marked *