ದುನಿಯಾ ‘ರುಣ’ಕ್ಕೆ ಸಲಗ ಸಕ್ಸಸ್ ಸಮರ್ಪಣೆ
ದುನಿಯಾ ವಿಜಯ್ 2021ರಲ್ಲಿ ಸಿಹಿ ಕಹಿ ಎರಡನ್ನು ಕಂಡಿದ್ದಾರೆ, ತಾವು ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿ ಅದರಲ್ಲಿ ಸಕ್ಸಸ್ ಕೂಡ ಪಡೆದುಕೊಂಡಿದ್ದಾರೆ, ಸಲಗ ಚಿತ್ರ ಸಕ್ಸಸ್ ಆಗಿರುವುದು ಅವರಿಗೆ ಸಿಹಿ ನೀಡಿದ್ರೆ, ಮಗನ ಗೆಲುವನ್ನು ಕಣ್ತುಂಬಿಕೊಳ್ಳುವ ಹೊತ್ತಲಿ ವಿಜಯ್ ಅವರ ತಾಯಿ ನಾರಾಯಣಮ್ಮ ನಿಧನರಾದರು, ತನ್ನ ಗೆಲುವನ್ನು ನೋಡದೆ ಅಮ್ಮ ತೀರಿಕೊಂಡರೆಂಬ ಕೊರಗಿನಲ್ಲಿದ್ದಾಗಲೇ ವಿಜಯ್ ತಂದೆ ಕೂಡ ನಿಧನರಾದರು.
ತಮ್ಮ ಹುಟ್ಟೂರಾದ ಕುಂಬಾರಹಳ್ಳಿಯಲ್ಲಿ ತಾಯಿ ಮತ್ತು ತಂದೆಗೆ ದೇವಾಲಯ ಕಟ್ಟಿಸಿ ಆ ಜಾಗಕ್ಕೆ “ದುನಿಯಾ ರುಣ” ಎಂದು ನಾಮಕರಣ ಮಾಡಿದ್ದಾರೆ. ಇಂದು ತಮ್ಮ ಸಲಗದ ಗೆಲುವನ್ನು ತಂದೆ ತಾಯಿಗೆ ಸಮರ್ಪಿಸಿದ್ದಾರೆ.

ಸಲಗ ಗೆಲುವನ್ನ ತಂದೆ ತಾಯಿ ಹಾಗೂ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ ದುನಿಯಾ ವಿಜಯ್. ತಂದೆ ತಾಯಿ ಸಮಾಧಿ ಬಳಿ ಅಭಿಮಾನಿಗಳೊಟ್ಟಿಗೆ ಸಲಗ ಸಕ್ಸಸ್ ಆಚರಣೆ ಮಾಡಿದ್ದಾರೆ. ಹುಟ್ಟೂರು ಕುಂಬಾರನಹಳ್ಳಿಯಲ್ಲಿ ಸಲಗ ಗೆಲುವನ್ನ ಅವಿಸ್ಮರಣೀಯವಾಗಿಸಿದ್ದಾರೆ ವಿಜಯ್ ಪತ್ನಿ ಕೀರ್ತಿ.
ರಾಜ್ಯದ ವಿವಿಧ ಊರುಗಳಿಂದ ಬಂದ ದುನಿಯಾ ವಿಜಯ್ ಅಭಿಮಾನಿಗಳಿಗೆ ಊಟ ಬಡಿಸಿದ ವಿಜಯ್ ದಂಪತಿ. ವೃತ್ತಿ ಬದುಕಿನ ಮತ್ತೊಂದು ತಿರುವಾದ ಸಲಗ ಚಿತ್ರವನ್ನ ಅಪ್ಪ ಅಮ್ಮನಿಗೆ ಅರ್ಪಿಸಿ ಭಾವುಕವಾಗಿ ಸ್ಮರಿಸಿದ ವಿಜಯ್.
ತಂದೆ ತಾಯಿ ಸಮಾಧಿ ಜಾಗಕ್ಕೆ “ದುನಿಯಾ ರುಣ” ಎಂದು ನಾಮಕರಣ ಮಾಡಿರೋ ವಿಜಯ್ , ರು ಎಂದರೇ ರುದ್ರಪ್ಪ, ಣ ಎಂದರೇ ನಾರಾಯಣಮ್ಮ ಅಪ್ಪ ಅಮ್ಮನ ಹೆಸರಿನ ಮೊದಲ ಮತ್ತು ಕೊನೆಯ ಅಕ್ಷರವನ್ನ ಸೇರಿಸಿ ದುನಿಯಾ ರುಣ ಎಂದು ಹೆಸರಿಟ್ಟಿದ್ದಾರೆ ದುನಿಯಾ ವಿಜಯ್. ಈ ಮೂಲಕ ಬದುಕಿನುದ್ದಕ್ಕೂ ಸಾಧನೆಯ ಉದ್ದಕ್ಕೂ ಅಪ್ಪ ಅಮ್ಮನ ನೆನಪು ಉಳಿಸಿಕೊಂಡಿದ್ದಾರೆ ವಿಜಯ್.
****