News

‘ದುನಿಯಾ ವಿಜಯ್’ ತನ್ನ ಮದುವೆಗೆ ಬರಲೇಬೇಕೆಂದು ಬೇಡಿಕೆ ಇಟ್ಟ ವಧು!

‘ದುನಿಯಾ ವಿಜಯ್’ ತನ್ನ ಮದುವೆಗೆ ಬರಲೇಬೇಕೆಂದು ಬೇಡಿಕೆ ಇಟ್ಟ ವಧು!
  • PublishedNovember 24, 2021

ತನ್ನ ಮದುವೆಗೆ ಮೆಚ್ಚಿನ ನಟ ದುನಿಯಾ ವಿಜಯ್ ಬಂದು ಆಶೀರ್ವಾದ ಮಾಡಲೇಬೇಕು ಎಂದು ದಾವಣಗೆರೆಯಲ್ಲಿ  ಅನುಷಾ ಎಂಬ ವಧು ಬೇಡಿಕೆ ಇಟ್ಟಿದ್ದಾಳೆ. ದಾವಣಗೆರೆ ಮೂಲದ ಅನುಷಾ ಎಂಬ ಯುವತಿ ದುನಿಯಾ ವಿಜಯ್‌ ಅವರ ಅಭಿಮಾನಿ. ಹಾಗಾಗಿ ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಅವರು ಆಗಮಿಸಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುತ್ತೇನೆ ಎಂದು ಪಟ್ಟು ಹಿಡಿದಿದ್ದಾಳೆ.

ಈ ಯುವತಿ ನಟ ದುನಿಯಾ ವಿಜಯ್​ ಬರುವವರೆಗೂ ತಾಳಿ ಕಟ್ಟಿಸಿ ಕೊಳ್ಳುವುದಿಲ್ಲ ಅಂತ ಹಠ ಹಿಡಿದಿದ್ದಾಳೆ. ತನ್ನ ಮದುವೆಗೆ ದುನಿಯಾ ವಿಜಯ್ ಅವರ ಆಶೀರ್ವಾದ ಬೇಕು ಎನ್ನುತ್ತಿದ್ದಾಳೆ. ಮದುವೆಗೆ ಯಾರು ಬರದಿದ್ದರೂ ತೊಂದರೆಯಿಲ್ಲ. ಆದರೆ, ದುನಿಯಾ ವಿಜಯ್ ಬರಲೇಬೇಕು. ಇಲ್ಲದಿದ್ದರೆ ಮದುವೆಯೇ ಆಗುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾಳೆ ಈ ಯುವತಿ.

ದಾವಣಗೆರೆಯ ಶ‍್ರೀರಾಮ ನಗರದಲ್ಲಿ ಅನುಷಾ ಎಂಬ ವಧುವಿನ ಮದುವೆ ಪ್ರಕಾಶ್ ಎಂಬವರೊಂದಿಗೆ ನವಂಬರ್ 29 ಕ್ಕೆ ನಿಗದಿಯಾಗಿದೆ. ವಧು ಅನುಷಾ ದುನಿಯಾ ವಿಜಿಯ ದೊಡ್ಡ ಅಭಿಮಾನಿ. ಆಕೆಯ ತಂದೆಯೂ ವಿಜಿ ಅಭಿಮಾನಿ. ಗೃಹಪ್ರವೇಶವನ್ನೂ ವಿಜಿ ಕೈಯಲ್ಲೇ ಮಾಡಿಸಿದ್ದರಂತೆ. ಇವರ ಇಡೀ ಕುಟುಂಬವೇ ದುನಿಯಾ ವಿಜಯ್ ಅಭಿಮಾನಿ. ಅವರ ಮನೆಗೆ ‘ದುನಿಯಾ ಋಣ’ ಎನ್ನುವ ಹೆಸರು ಇಟ್ಟಿದ್ದಾರೆ. ಐದು ವರ್ಷದ ಹಿಂದೆ ಮನೆ ಕಟ್ಟಿದ್ದು ಗೃಹ ಪ್ರವೇಶಕ್ಕೆ ನಟ ದುನಿಯಾ ವಿಜಯ್ ಬರಬೇಕೆಂದು ಆಗಲೂ ಮನೆಯನ್ನು ಹಾಗೆಯೇ ಬಿಟ್ಟಿದ್ದು. ನಂತರ ದುನಿಯಾ ವಿಜಯ್ ಅವರ ಮನೆಯ ಗೃಹ ಪ್ರವೇಶಕ್ಕೆ ಹೋಗಿದ್ದರು.

ಶಿವಾನಂದ ಭಜಂತ್ರಿ ಅವರ ಪುತ್ರಿ ಅನುಷಾ ವಿವಾಹ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಫೋಟೊ ಪಕ್ಕ ನೆಚ್ಚಿನ ನಟ ದುನಿಯಾ ವಿಜಯ್ ಅವರ ಫೋಟೊವನ್ನು ಮುದ್ರಿಸಿದ್ದಾರೆ. ಜೊತೆಗೆ ‘ಒಂಟಿ ಸಲಗ’ ಎಂದು ತಮ್ಮ ಕೈಗೆ ಅನುಷಾ ಹಚ್ಚೆಯನ್ನೂ ಹಾಕಿಸಿಕೊಂಡಿದ್ದಾರೆ. ತನ್ನ ಮದುವೆಗೂ ವಿಜಿ ಬರಲೇಬೇಕು. ಇಲ್ಲವಾದರೆ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಅನುಷಾ ಹಠ ಹಿಡಿದಿದ್ದಾಳೆ. ಇದೀಗ ಅಭಿಮಾನಿಯ ಹಠಕ್ಕೆ ಮಣಿದು ವಿಜಿ ಮದುವೆಗೆ ಬರುತ್ತಾರಾ ಕಾದು ನೋಡಬೇಕು.

****

Written By
Kannadapichhar

Leave a Reply

Your email address will not be published. Required fields are marked *