ದುನಿಯಾ ವಿಜಯ್ ರಾಜ್ ಬಿ.ಶೆಟ್ಟಿ ಗೆ ರೂಲರ್ ಎಂದಿದ್ದೇಕೆ?
‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿ ದುನಿಯಾ ವಿಜಿ ಹಾಗೂ ರಾಜ್ ಬಿ.ಶೆಟ್ಟಿ ಒಟ್ಟಿಗೆ ನಟನೆ ಮಾಡಿದ್ದು, ಚಿತ್ರದ ಸುದ್ದಿಗೋಷ್ಠಿಯಲ್ಲಿ ರಾಜ್ ಅವರನ್ನು ರೂಲರ್ ಎಂದರು. ಈ ವಿಚಾರವಾಗಿ ಸಂಪೂರ್ಣ ವಿವರಣೆ ಇಲ್ಲಿದೆ.
‘ಲ್ಯಾಂಡ್ ಲಾರ್ಡ್’ ಚಿತ್ರದ ಎರಡನೇ ಟೀಸರ್ ಲಾಂಚ್ ಹಾಗೂ ಸುದ್ದಿಗೋಷ್ಠಿ ಕಾರ್ಯಕ್ರಮ ಇಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಿನಿಮಾದಲ್ಲಿ ದುನಿಯಾ ವಿಜಯ್ ಹಾಗೂ ರಾಜ್ ಬಿ.ಶೆಟ್ಟಿ ಅವರ ಕಾಂಬೊ ಇರುವುದು ಕುತೂಹಲವನ್ನ ಹೆಚ್ಚಿಸಿದೆ.
ದುನಿಯಾ ವಿಜಯ್ ಅವರು ರಾಜ್ ಬಿ.ಶೆಟ್ಟಿ ಅವರ ಬಗ್ಗೆ ಮಾತನಾಡುತ್ತ ” 20 ವರ್ಷದ ಹಿಂದೆ ಏನೂ ಇಲ್ಲದೆ ನಾನ್ ಬಂದೆ, ಮತ್ತೆ ಒಂದು ಮೊಟ್ಟೆಯ ಕಥೆ ಎಂಬ ಚಿತ್ರದ ಮೂಲಕ ರಾಜ್ ಅವರು ಸಿನಿಮಾ ರಂಗಕ್ಕೆ ಬಂದ್ರು, ಆ ಟೈಮ್ ಅಲ್ಲಿ ನಮ್ಮಿಬ್ಬರನ್ನು ಆಡ್ಕೊಂಡಿದ್ದರು. ಈಗ ನಾನು ಸರ್ವೈವರ್ ರಾಜ್ ಅವರು ರೂಲರ್” ಎಂದು ಹೇಳಿ ಚಿತ್ರ ರಂಗದ ಮೊದಲ್ಲಲ್ಲಿ ಆಡಿಕೊಂಡಿದ್ದವರಿಗೆ ಸರಿಯಾಗಿ ಉತ್ತರಿಸಿದರು.
ಜೊತೆಗೆ ಸಮಾರಂಭದಲ್ಲಿ ರಾಜ್ ಬಿ.ಶೆಟ್ಟಿ ಅವರನ್ನು ಹೊಗಳಿ ಹಣೆಗೆ ಮುತ್ತಿಟ್ಟರು.ಇನ್ನು ಚಿತ್ರದಲ್ಲಿ ದುನಿಯಾ ವಿಜಯ್ ಅವರು ಪಾಸಿಟಿವ್ ರೋಲ್ ಮಾಡುತ್ತಿದ್ದು, ರಾಜ್ ಅವರು ನೆಗೆಟಿವ್ ಶೇಡ್ ನಲ್ಲಿ ಮಿಂಚಲಿದ್ದಾರೆ.