ಪಿಚ್ಚರ್ UPDATE

ಕೊನೆಗೂ ವಿಷ್ಣು ಅಭಿಮಾನಿಗಳು ಕಾದಿದ್ದ ದಿನ ಬಂದೇ ಬಿಡ್ತು

ಕೊನೆಗೂ ವಿಷ್ಣು ಅಭಿಮಾನಿಗಳು ಕಾದಿದ್ದ ದಿನ ಬಂದೇ ಬಿಡ್ತು
  • PublishedNovember 18, 2022

ವಿಷ್ಣುವರ್ಧನ್‌ ಅಭಿಮಾನಿಗಳಿಗೆ ಸದಾ ಕಾಡುತ್ತಿದ್ದ ಏಕೈಕ ವಿಚಾರ ಅಂದ್ರೆ ಅದು ವಿಷ್ಣು ಸ್ಮಾರಕ ನಿರ್ಮಾಣ ಆಗಿಲ್ಲ ಅನ್ನೋದು.. ಈಗ ಸಾಹಸಸಿಂಹನ ಕುಟುಂಬ ಆಸೆಯಂತೆ ಅಬೀಮಾನಿಗಳ ಆಸೆಯಂತೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ಸಿದ್ದವಾಗಿದೆ…ಮುಂದಿನ ತಿಂಗಳು ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ಆಗಲಿದೆ…
ಮೈಸೂರಿನಲ್ಲಿ ಭಾರತಿ ವಿಷ್ಣುವರ್ಧನ್‌ ಅವ್ರ ಆಸೆಯಂತೆ ನಿರ್ಮಾಣವಾಗುತ್ತಿದೆ ವಿಷ್ಣುವರ್ಧನ್ ಸ್ಮಾರಕ…ಡಿಸೆಂಬರ್ 18 ರಂದು ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ…

ಮೈಸೂರಿನ ಹಾಲಾಳು ಗ್ರಾಮದಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ ವಿಷ್ಣುವರ್ಧನ್ ಸ್ಮಾರಕ..ಇದೇ ವಿಚಾರವಾಗಿ ಇತ್ತೀಚೆಗೆ ಸಿಎಂ ಬೊಮ್ಮಾಯಿ‌ ಭೇಟಿಯಾಗಿ ಸ್ಮಾರಕ ಉದ್ಘಾಟನೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಭಾರತಿ ವಿಷ್ಣುವರ್ಧನ್..ವಿಷ್ಣುವರ್ಧನ್ ಸ್ಮಾರಕದ ಬಳಿ ವಿಷ್ಣುವರ್ಧನ್ ಸಿನಿ ಜರ್ನಿಯ ಆಡಿಯೋ ವಿಡಿಯೋ ಗ್ಯಾಲರಿ ಮತ್ತು ಪುಣೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಶಾಖೆ ಸಹ ಆರಂಭವಾಗಲಿದೆ…ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ‌ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ….

Written By
Kannadapichhar