News

ಅತ್ಯುತ್ತಮ ನಟ ಪ್ರಶಸ್ತಿ ಪಡೆದ ನಾಯಿ!

ಅತ್ಯುತ್ತಮ ನಟ ಪ್ರಶಸ್ತಿ ಪಡೆದ ನಾಯಿ!
  • PublishedFebruary 21, 2021

ಕನ್ನಡ ಸಿನೆಮಾ ಪತ್ರಕರ್ತರು ಕೊಡುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ಸಿನೆಮಾ ಪ್ರಶಸ್ತಿಗಳಲ್ಲಿ ಸಿಂಬ ಎಂಬ ನಾಯಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದೆ. ನಾನು ಮತ್ತು ಗುಂಡ ಸಿನಿಮಾದಲ್ಲಿನ ತನ್ನ ಅಭಿನಯಕ್ಕಾಗಿ ಎಂಟು ವರ್ಷದ ಸಿಂಬ ಎಂಬ ಲ್ಯಾಬ್ರಡರ್ ನಾಯಿಗೆ “ಅತ್ಯುತ್ತಮ ನಟ – ನಾನ್-ಯುಮನ್,” ವರ್ಗದಲ್ಲಿ ಈ ಪ್ರಶಸ್ತಿ ಕೊಡಲಾಗಿದೆ.

ಅಮೆರಿಕ ಹಾಗೂ ಕೆಲವು ದೇಶಗಳಲ್ಲಿ ಸಿನೆಮಾಗಳಲ್ಲಿ ನಟಿಸಿದ ಪ್ರಾಣಿಗಳಿಗಾಗಿಯೇ ಕೆಲವು ಪ್ರಶಸ್ತಿಗಳು ಇವೆ. ಆದರೆ, ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ ಪ್ರಾಣಿಯೊಂದಕ್ಕೆ ಮನುಷ್ಯರ ಮದ್ಯೆ ಪ್ರಶಸ್ತಿ ಸಿಕ್ಕಿದೆ.

ಭಾನುವಾರ ಸಂಜೆ ನಡೆದ ಚಂದನವನ ಎರಡನೇ ವರ್ಷದ ಪ್ರಶಸ್ತಿ ಸಮಾರಂಭದಲ್ಲಿ 2020 ಸಾಲಿನಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಿಗೆ 21 ವರ್ಗಗಳಲ್ಲಿ ಪ್ರಶಸ್ತಿ ವಿತರಿಸಲಾಯಿತು. ಸಿಂಬನಿಗಾಗಿಯೇ ಈ ಬಾರಿ “ಅತ್ಯುತ್ತಮ ನಟ – ನಾನ್-ಯುಮನ್,” ಕೆಟಗರಿಯನ್ನು ಸೇರಿಸಲಾಗಿತ್ತು. ನಾಮಿನೇಟ್ ಆದ ಏಕೈಕ ಅಭ್ಯರ್ಥಿ ಸಿಂಬ.

ಬೆಂಗಳೂರಿನ ಈ ಪ್ರತಿಭೆ ಮೊದಲು ನಟನೆ ಮಾಡಿದ್ದು Bangalore Days ಅನ್ನೋ ಮಳಯಾಳಿ ಚಿತ್ರದಲ್ಲಿ. ಅಲ್ಲಿಂದ Gultoo ಮತ್ತು ಕಳೆದ ವರ್ಷದ ಶಿವಾಜಿ ಸುರತ್ಕಲ್ ಸೇರಿ ಹಲವು ಕನ್ನಡ ಸಿನೆಮಾಗಳು, short-films ಮತ್ತು ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾನೆ.

ಸಿಂಬನ trainer ಸ್ವಾಮಿ ಯವರು. ಸಿಂಬನನ್ನು ಅವನ 45ನೆ ದಿನದಿಂದ ಇಲ್ಲಿವರೆಗೂ ಪಾಲನೆ ಮಾಡಿರುವುದು ವರುಣ್.

Written By
Kannadapichhar

Leave a Reply

Your email address will not be published. Required fields are marked *