ರಾಕಿಭಾಯ್ ಮನೆಯ ದೀಪಾವಳಿ..!

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ…ಯಾವುದೇ ಹಬ್ಬವಿರಲಿ ಮಿಸ್ ಮಾಡದೇ ಸೆಲಬ್ರೇಟ್ ಮಾಡ್ತಾರೆ ಯಶ್ ಮತ್ತು ರಾಧಿಕಾ.. ಇನ್ನು ಮಕ್ಕಳಾದ ಮೇಲಂತು ಮಕ್ಕಳ ಜೊತೆಯಲ್ಲಿ ಹಬ್ಬ ಆಚರಣೆ ಮಾಡೋದು ಕಾಮನ್ ಆಗಿ ಬಿಟ್ಟಿದೆ …



ದೀಪಾವಳಿ ಹಬ್ಬವನ್ನ ಸಂಭ್ರಮದಿಂದ ಸೆಲಬ್ರೇಟ್ ಮಾಡಿರೋ ರಾಧಿಕಾ ಯಶ್. ಹಬ್ಬದ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ…ಐರಾ ಹಾಗೂ ಯಥರ್ವ್ ಜೊತೆ ಸೇರಿ ಪಟಾಕಿಯನ್ನು ಹೊಡೆದಿದ್ದಾರೆ..ನಾಲ್ಕು ಜನರು ಹೊಸ ಬಟ್ಟೆ ಧರಿಸಿ ಕಲರ್ ಫುಲ್ ಆಗಿ ಕಾಣಿಸ್ತಾ ಇದ್ದಾರೆ…


ಇನ್ನು ಯಶ್ ಮತ್ತು ಯಥರ್ವ್ ಒಂದೇ ಕಾಂಬಿನೇಷನ್ ಕಲರ್ ಡ್ರಸ್ ನಲ್ಲಿ ಮಿಂಚಿದ್ರೆ ರಾಧಿಕಾ ಮತ್ತು ಐರಾ ಒಂದೇ ಕಲರ್ ಡ್ರಸ್ ಧರಿಸಿ ಹಬ್ಬ ಆಚರಣೆ ಮಾಡಿದ್ದಾರೆ..ಒಟ್ನಲ್ಲಿ ರಾಧಿಕಾ ಮನೆಯಲ್ಲಿ ದೀಪಾವಳಿ ಜೋರಾಗಿದೆ…ಈ ಜೋಡಿ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಹಬ್ಬದ ಶುಭಾಶಯ ಹೇಳೋದ್ರಾ ಜೊತೆಯಲ್ಲಿ ಹೊಸ ಸಿನಿಮಾ ಯಾವಾಗ ಅನೌನ್ಸ್ ಮಾಡ್ತಿರಾ ಅಂತ ಕೇಳ್ತಿದ್ದಾರೆ…