‘ಟಾಕ್ಸಿಕ್ ‘ ಸುಳ್ಳು ವದಂತಿಗಳಿಗೆ ಬ್ರೇಕ್ ಹಾಕಿದ ದಿಲ್ ರಾಜು!
ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಚಿತ್ರದ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ವಿತರಣಾ ಹಕ್ಕನ್ನು ದಿಲ್ ರಾಜು ಅವರ ಮಾಲೀಕತ್ವದ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ (SVC) ಗೆ 120 ಕೋಟಿಗೆ ಮಾರಾಟವಾಗಿದೆ. ಆದರೆ ಈ ವಿಚಾರವಾಗಿ ಕೇಳಿ ಬರುತ್ತಿದ ಅನುಮಾನಗಳಿಗೆ ದಿಲ್ ರಾಜು ಅವರು ಖಡಕ್ ಉತ್ತರ ನೀಡುವ ಮೂಲಕ ವದಂತಿಯನ್ನು ತಳ್ಳಿ ಹಾಕಿದ್ದಾರೆ.
ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿರುವ ಅವರು ” 120 ಕೋಟಿಯ ಡೀಲ್ ಸುಳ್ಳು ಎಂದು ವಾದಿಸುತ್ತಿರುವವರಿಗೆ ಹೇಳುವುದಿಷ್ಟೇ ಹಣ ವರ್ಗಾವಣೆಯಾದ ನಂತರ ನಾನು ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನೇ ತೋರಿಸ್ತೀನಿ ” ಎಂದು ಹೇಳಿದ್ದಾರೆ.
ಹೀಗೆ ಹೇಳುವುದರ ಮೂಲಕ ಈ ಬೇಸ್ ಲೆಸ್ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಇನ್ನೇನು ಚಿತ್ರ ಕೆಲವೇ ದಿನಗಳಲ್ಲಿ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿರುವ ಟೈಮ್ ನಲ್ಲಿ ಈ ರೀತಿಯ ವದಂತಿಗಳು ಬ್ಯಾಕ್ ಟು ಬ್ಯಾಕ್ ಬರುತ್ತಿರುವುದು ಪ್ರಶ್ನೆಗೆ ಗ್ರಾಸ್ತವಾಗಿದೆ.