‘ರಾಜ್ ಸರ್ಜಾ’ ಹೆಸರಿನಲ್ಲೇ ಗತ್ತಿದೆ- ಧ್ರುವಾ ಸರ್ಜಾ

ಅಣ್ಣನ ಮಗನ ನಾಮಯಕರಣವನ್ನ ಅದ್ಧೂರಿಯಾಗಿ ನೆರವೇರಿಸ್ತಿರೋ ಧ್ರುವಾ ಸರ್ಜಾ, ಮನಗ ಹೆಸರಲ್ಲಿ ಗತ್ತಿದೆ ಗಾಂಭೀರ್ಯವಿದೆ. ರಾಜ್ ಸರ್ಜಾ ಹೆಸರಲ್ಲಿ ಆವೊಂದು ಪಾಸಿಟೀವ್ ಎನರ್ಜಿ ಇದೆ. ಅಣ್ಣ ಮರಳಿ ರಾಯನ್ ರೂಪದಲ್ಲಿ ನಮ್ಮ ಮನೆ ಮನ ತುಂಬಿದ್ದಾನೆ.

ಎರಡೂ ಕುಟುಂಬಗಳು ಈ ಕಂದನ ಮೂಲಕ ಚಿರುನ ಮತ್ತೆ ಪಡೆದಂತಾಗಿದೆ. ಸರ್ಜಾ ಕುಟುಂಬ, ರಾಜ್ ಕುಟುಂಬ ಯಾವಾಗಲೂ ಒಂದೇ. ಯೂಟ್ಯೂಬ್ ಹಾವಳಿಯಿಂದ ಸ್ವಲ್ಪ ಬೇಜಾರಾಗಿದೆ. ಕೆಲವರು ನಮ್ಮ ಮಧ್ಯೆನೇ ತಂದಿಡೋಕೆ ಪ್ರಯತ್ನ ಮಾಡಿದ್ರು. ಅದು ಸಾಧ್ಯವಾಗಲ್ಲ, ನಾವು ಎಂದಿಗೂ ಒಂದೇನೆ. ರಾಯನ್ ಗೆ ನಿಮ್ಮೆಲ್ಲರ ಪ್ರೀತಿಯಿರಲಿ. ಅಂತ ಧ್ರುವಾ ಕುಟುಂಬದೊಟ್ಟಿಗೆ ಅಭಿಮಾನಿಗಳಿಗೆ ಅಣ್ಣನನ ಮಗನ ಹೆಸರನ್ನ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ.
****