News

ಕನ್ಫರ್ಮ್..‌ ಕನ್ಫರ್ಮ್.. ಜೋಗಿ – ಧ್ರುವಾ ಸಿನಿಮಾ ಕನ್ಫರ್ಮ್..! D 6 ಸಿನಿಮಾಗೆ ಜೋಗಿ ಪ್ರೇಮ್ ನಿರ್ದೇಶನ

ಕನ್ಫರ್ಮ್..‌ ಕನ್ಫರ್ಮ್.. ಜೋಗಿ – ಧ್ರುವಾ ಸಿನಿಮಾ ಕನ್ಫರ್ಮ್..! D 6 ಸಿನಿಮಾಗೆ ಜೋಗಿ ಪ್ರೇಮ್ ನಿರ್ದೇಶನ
  • PublishedAugust 24, 2021

ದೃವಸರ್ಜಾ ಅವರ 6 ನೇ ಸಿಸಿಮಾ ಜೋಗಿ ಪ್ರೇಮ್ ಅವರ ಕಾಂಬಿನೇಶನ್ ನಲ್ಲಿ ಬರುವುದು ಕರ್ಫಮ್ ಆಗಿದೆ. ಕೆಲವು ದಿನಗಳಿಂದ ದೃವ ಮತ್ತು ಪ್ರೇಮ್ ಕಾಂಬಿನೇಶನ್ ನಲ್ಲಿ ಸಿನಿಮಾ ಬರುತ್ತಾ? ಇಲ್ಲವಾ ? ಎಂಬ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು, ನೆನ್ನೆಯಷ್ಟೆ ದೃವ ತಮ್ಮ ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಅವರ 6ನೇ ಸಿನಿಮಾ ಬಗ್ಗೆ ಇಂದು ಅನೌನ್ಸ್ ಮಾಡುವ ಬಗ್ಗೆ ವೀಡಿಯೋ ಒಂದನ್ನು ಶೇರ್ ಮಾಡಿದ್ದರು. ಹಾಗಾಗಿ ದೃವಸರ್ಜಾ ಅವರ ಅಭಿಮಾನಿಗಳಿಗೆ ಬಹಳ ಕುತೂಹಲ ಮೂಡಿತ್ತು, ಯಾರು ಸಿನಿಮಾ ನಿರ್ದೇಶನ ಮಾಡ್ತಾರೆ ಅಂತ, ,ಈಗ  ಆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದ್ದು ಜೋಗಿ ಪ್ರೇಮ್ ಅವರು ದೃವಸರ್ಜಾ ಅವರ 6ನೇ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ.

D 6 ಸಿನಿಮಾಗೆ ಜೋಗಿ ಪ್ರೇಮ್ ನಿರ್ದೇಶನ
D 6 ಸಿನಿಮಾಗೆ ಜೋಗಿ ಪ್ರೇಮ್ ನಿರ್ದೇಶನ

ಕಳೆದ ವಾರವಷ್ಟೆ ದೃವಸರ್ಜಾ ಅವರ 5ನೇ ಸಿನಿಮಾ ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರ ಮುಹೂರ್ತ ನಡೆದು ಶೂಟಿಂಗ್ ಪ್ರಾರಂಭವಾದ ಬೆನ್ನಲ್ಲೆ ದೃವಸರ್ಜಾ ಅವರ 6ನೇ ಸಿನಿಮಾ ಅನೌನ್ಸ್ ಆಗಿರುವುದು ಜೋಗಿ ಪ್ರೇಮ್ ಮತ್ತು ಆಕ್ಷನ್ ಪ್ರಿನ್ಸ್ ದೃವ  ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಚಿತ್ರಕ್ಕೆ ಶೀರ್ಷಿಕೆ ಏನು ಎಂಬುದು ಇನ್ನು ಬಹಿರಂಗವಾಗಿಲ್ಲಾ.

ದೃವ ಮತ್ತು ಪ್ರೇಮ್ ಜೊತೆಯಾಗಿ ಸಿನಿಮಾ ಮಾಡುವ ಸುದ್ದಿ ಮಾತ್ರ ಬಹಿರಂಗವಾಗಿದ್ದು ಸಿನಿಮಾ ಕುರಿತಾದ ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ.

****

Written By
Kannadapichhar

Leave a Reply

Your email address will not be published. Required fields are marked *