ಹೊಸಪೇಟೆಯಲ್ಲಿ ‘ರಾಣಾ’ ಚಿತ್ರದ ಸಾಂಗ್ ಲಾಂಚ್, ಪಂಚಿಂಗ್ ಡೈಲಾಗ್ ಹೊಡೆದ ಧ್ರುವಾ ಸರ್ಜಾ
ನಂದಕಿಶೋರ್ ನಿರ್ದೇಶನದ, ಶ್ರೇಯಸ್ ಕೆ. ಮಂಜು ರೀಷ್ಮಾ ನಾಣಯ್ಯ ಜೋಡಿಯಾಗಿ ಅಭಿನಯಿಸಿರುವ ‘ರಾಣ’, ಚಿತ್ರದ ಹಾಡನ್ನು ಇಂದು ಲಾಂಚ್ ಮಾಡಲಾಗಿದೆ. ಹೊಸಪೇಟೆಯ ಹುಲಿಗೆಯಮ್ಮ ದೇವಸ್ಥಾನದಲ್ಲಿ ರಾಣಾ ಚಿತ್ರದ ಹಾಡನ್ನು ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಬಿಡುಗಡೆ ಮಾಡಿದ್ದಾರೆ.
ಹೊಸಪೇಟೆಯಲ್ಲಿ ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ಶ್ರೇಯಸ್ ಮಂಜು, ಧ್ರುವಾ ಸರ್ಜಾ,ನಿರ್ದೇಶಕ ನಂದಕಿಶೋರ್ ಭಾಗವಹಿಸಿದ್ರು. ಧ್ರುವಾ ಸರ್ಜಾ ಮತ್ತು ಚಿತ್ರ ತಂಡವನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ನೆರೆದಿತ್ತು. ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಧ್ರುವಾ ಸರ್ಜಾ ನನಗೆ ಹೊಸಪೇಟೆ ಹೊಸದಲ್ಲ ನನಗೂ ಹೊಸಪೇಟೆಗೂ ಒಂದು ನಂಟಿದೆ, ಹೊಸಬರನ್ನು ಹೊಸಬರ ಸಿನಿಮಾಗಳನ್ನು ಪ್ರೋತ್ಸಾಯಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ರು. ಕಾರ್ಯಕ್ರಮದ ಪ್ರಾರಂಭದಲ್ಲಿ ಚಿರಂಜೀವಿ ಸರ್ಜಾ ಮತ್ತು ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿ ಮಾತು ಪ್ರಾರಂಭಿಸಿದ್ರು ಧ್ರುವಾ ಸರ್ಜಾ
****