News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ!…

ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ!…
  • PublishedDecember 5, 2025

ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ‘ಡೆವಿಲ್’ ಡಿಸೆಂಬರ್ 11 ಕ್ಕೆ ತೆರೆ ಮೇಲೆ ಸಿನಿ ಪ್ರಿಯರನ್ನು ರಂಜಿಸಲು ಸಜ್ಜಾಗಿದ್ದು, ಚಿತ್ರದ ಟ್ರೈಲರ್ ಇಂದು ರಿಲೀಸ್ ಆಗಿದೆ. ಹಾಗಾದ್ರೆ ಟ್ರೈಲರ್ ಅಲ್ಲಿ ಏನೇನಿತ್ತು? ದರ್ಶನ್ ಅವರ ಪಾತ್ರ ಯಾವುದು? ಇಲ್ಲಿದೆ ಅದರ ವಿವರ.

ಚಿತ್ರದಲ್ಲಿ ದರ್ಶನ್ ಅವರು ಧನುಷ್ ಎಂಬ ಪಾತ್ರಕ್ಕೆ ಬಣ್ಣ ಹಾಕಿದ್ದು, ಇಲ್ಲಿ ದರ್ಶನ್ ಅವರ ತನ್ನನ್ನು ತಾನು “ಡೆವಿಲ್” ಎಂದು ಕರೆಯೋದು ಹಾಗೂ ರಚನಾ ರೈ ಅವರ “ನಿಮಿಷಕ್ಕೊಂದು ಬಣ್ಣ” ಅನ್ನೋ ಡೈಲಾಗ್, ಡಿಬಾಸ್ ಚಿತ್ರದಲ್ಲಿ ಬೇರೆ ಬೇರೆ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುಳಿವು ನೀಡಿದೆ.

ಜೊತೆಗೆ ಟ್ರೈಲರ್ ನಲ್ಲಿ ರಾಜಕೀಯ ಚಿತ್ರಣಗಳು ಇದ್ದು,ದರ್ಶನ್ ಹಾಗೂ ರಾಜಕೀಯ ಪಾತ್ರಗಳ ನಡುವೆ ನಡೆಯುವ ಸಿನಿಮಾ ಎಂದು ಸಣ್ಣ ಕುರುಹು ಸಿಕ್ಕಿದೆ.

ಮಾಸ್ ಡೈಲಾಗ್ ಮೆರಗು

ದರ್ಶನ್ ಸಿನಿಮಾ ಅಂದ್ಮೇಲೆ ಮಾಸ್ ಡೈಲಾಗ್ ಗಳ ಅಬ್ಬರ ಇದ್ದೇ ಇರುತ್ತೆ ಹಾಗಾಗಿ ಟ್ರೈಲರ್ ನಲ್ಲಿರೋ ಪಂಚ್ಗಳು ಸಕ್ಕತ್ ಸದ್ದು ಮಾಡೋ ಎಲ್ಲಾ ಲಕ್ಷಣಗಳು ಕಾಣ್ತಿದೆ.ಜೊತೆಗೆ ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ ಅನ್ನೋದು ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದಂತಿದೆ.

ಸ್ಟೈಲಿಶ್ ಲುಕ್

ಚಿತ್ರದಲ್ಲಿ ದರ್ಶನ್ ಅವರ ಲುಕ್ ಈಗಾಗಲೇ ಫೇಮಸ್ ಆಗಿದ್ದು,ರಚನಾ ರೈ,ಗಿಲ್ಲಿನಟ, ವಿನಯ್ ಗೌಡ, ಚಂದು ಎಲ್ಲಾ ಪಾತ್ರಗಳು ಸ್ಟೈಲಿಶ್ ಆಗಿ ಮಿಂಚಲಿದ್ದಾರೆ ಎನ್ನುವುದು ಟ್ರೈಲರ್ ಅಲ್ಲಿ ಕಾಣಸಿಕ್ಕಿದೆ. ಆದರೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ ರೋಲ್ ಬಗ್ಗೆ ಯಾವುದೇ ಸೀಕ್ರೆಟ್ ಬಿಟ್ಟುಕೊಟ್ಟಿಲ್ಲಇದು ಇನ್ನು ಕುತೂಹಲವನ್ನು ಮೂಡಿಸಿದೆ.

Written By
Kannada Picchar

Leave a Reply

Your email address will not be published. Required fields are marked *